ನಿರಂಜನ ನೂರು: ರಂಗ ಓದು ಕಾರ್ಯಕ್ರಮ- ಸಂವಾದ

Update: 2024-09-23 12:01 GMT

ಕುಂದಾಪುರ: ಸಮುದಾಯ ಕುಂದಾಪುರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಘಟಕ ಮತ್ತು ಅಕ್ಷರ ಸಾಂಸ್ಕೃತಿಕ ಸಂಸ್ಥೆ ವಡೇರಹೋಬಳಿ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿರಂಜನ ನೂರು: ರಂಗ ಓದು ಕಾರ್ಯಕ್ರಮದ ಸಂವಾದ ಕಾರ್ಯಕ್ರಮದಲ್ಲಿ ನಿರಂಜನರ ನೂರನೆ ವರ್ಷಾಚರಣೆ ಸಂದರ್ಭ ಕನ್ನಡ ಸಾಂಸ್ಕೃತಿಕ ಸಾಹಿತ್ಯಿಕ ವಲಯದಲ್ಲಿ ಅವರ ಕುರಿತ ನಿರ್ಲಕ್ಷ್ಯ ಕಂಡುಬರುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ನಿರಂಜನರ ಕಿರುಪರಿಚಯದೊಂದಿಗೆ ಸಂವಾದವನ್ನು ಕವಿ, ನಾಟಕಕಾರ ಸಚಿನ್ ಅಂಕೋಲ ನಡೆಸಿಕೊಟ್ಟರು. ಪ್ರಾಧ್ಯಾಪಕ ಜಯಪ್ರಕಾಶ್ ಶೆಟ್ಟಿ ಮಾತನಾಡಿ, ಕಯ್ಯೂರು ಹೋರಾಟ ಕೂಡ ಸ್ವಾತಂತ್ರ್ಯ ಹೋರಾಟದ ಭಿನ್ನ ಮಾದರಿ ಎಂದು ವಿವರಿಸಿದರು.

ನಿರಂಜನರ ಧ್ವನಿ ಕಥೆಯನ್ನು ರಂಗಕರ್ಮಿ ವಾಸುದೇವ ಗಂಗೇರರ ನಿರ್ದೇಶನದಲ್ಲಿ ರಂಗ ಓದು ಮಾದರಿಯಲ್ಲಿ ಸಮು ದಾಯ ಸಂಗಾತಿಗಳು ಪ್ರಸ್ತುತ ಪಡಿಸಿದರು. ಡಾ.ಸದಾನಂದ ಬೈಂದೂರು, ಗಣೇಶ ಶೆಟ್ಟಿ, ಚಿನ್ನ ವಿ.ಗಂಗೇರ, ಸ್ಮಿತಾ, ಕಿರಣ, ಲಂಕೇಶ್, ಸಂಧ್ಯಾ ಭಟ್, ಶಂಕರ ಆನಗಳ್ಳಿ ಕತೆಯನ್ನು ಅಭಿನಯಿಸಿ ಓದಿದರು. ಹಿನ್ನೆಲೆ ಸಂಗೀತದಲ್ಲಿ ಕೆ.ಎಂ.ಬಾಲಕೃಷ್ಣ ಸಹಕರಿಸಿದರು.

ವಾಸುದೇವ ಗಂಗೇರ ರಾಗಸಂಯೋಜನೆಯ ಸಂವಿಧಾನ ಪ್ರಸ್ತಾವನೆಯ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾ ಯಿತು. ಸಮುದಾಯ ಅಧ್ಯಕ್ಷ ಡಾ.ಸದಾನಂದ ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಿಮ್ಮಪ್ಪ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷರ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ರವಿ ವಿ.ಎಂ. ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News