ಹೆಮ್ಮಾಡಿ ಸಿಪಿಎಂ ಶಾಖೆ ಸಮ್ಮೇಳನ ಉದ್ಘಾಟನೆ

Update: 2024-10-08 12:24 GMT

ಕುಂದಾಪುರ, ಅ.8: ಸಿಪಿಎಂ ಪಕ್ಷದ ರಾಜ್ಯ ಮತ್ತು ಜಿಲ್ಲಾ ಸಮ್ಮೇಳನದ ಪ್ರಯುಕ್ತ ಸೋಮವಾರ ಹೆಮ್ಮಾಡಿ ಶಾಖೆ ಸಮ್ಮೇಳನವು ಹೆಮ್ಮಾಡಿ ಗ್ರಾಮದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಬೈಂದೂರು ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಒಂದಲ್ಲ ಒಂದು ಚುನಾವಣೆಗಳಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಗೆದ್ದು ನಿರುದ್ಯೋಗ, ಬೆಲೆಯೇರಿಕೆ, ಖಾಸಗೀಕರಣ ನೀತಿಗಳ ಮೂಲಕ ಜನಸಾಮಾನ್ಯರ ಬದುಕನ್ನು ಸೋಲಿಸುತ್ತಿದೆ. ಚುನಾವಣೆಯಲ್ಲಿ ಅಲ್ಪ ಮತಗಳನ್ನು ಪಡೆಯುವ ಸಿಪಿಎಂ ಪಕ್ಷ ಜನರ ರಕ್ಷಣೆಯ ಹೋರಾಟದ ಮುಂಚೂಣಿಯಲ್ಲಿರುತ್ತದೆ. ಇದು ಕಮ್ಯುನಿಸ್ಟ್ ಪಕ್ಷಕ್ಕಿರುವ ಬದ್ಧತೆ ಎಂದು ಹೇಳಿದರು.

ಸಮ್ಮೇಳನವನ್ನು ಸಿಪಿಎಂ ಪಕ್ಷದ ಬೈಂದೂರು ವಲಯ ಸಮಿತಿ ಸದಸ್ಯ ಸಂತೋಷ್ ಹೆಮ್ಮಾಡಿ ಉದ್ಘಾಟಿಸಿದರು. ಧ್ವಜಾರೋಹಣವನ್ನು ಪಕ್ಷದ ಸದಸ್ಯ ಜಗದೀಶ್ ಆಚಾರ್ ನೆರವೇರಿಸಿದರು. ಕಾರ್ಯದರ್ಶಿ ಜಗದೀಶ್ ಆಚಾರ್ ವರದಿ ಮಂಡಿಸಿದರು. ಕಾಮ್ರೇಡ್ ಸೀತಾರಾಮ ಯೆಚೂರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಧ್ಯಕ್ಷತೆಯನ್ನು ಶೇಖರ ವಹಿಸಿದ್ದರು. ಹೆಮ್ಮಾಡಿ ಶಾಖೆಯ ನೂತನ ಕಾರ್ಯದರ್ಶಿಯಾಗಿ ಗಣೇಶ್ ಆಚಾರ್ ಆಯ್ಕೆಯಾ ದರು. ನ.3ರಂದು ನಡೆಯುವ ಬೈಂದೂರು ವಲಯ ಸಮ್ಮೇಳನ ಯಶಸ್ವಿಗೊಳಿಸಲು ತೀರ್ಮಾನ ಮಾಡಲಾಯಿತು. ನರಸಿಂಹ ದೇವಾಡಿಗ ವಂದಿಸಿದರು.

ಸಮ್ಮೇಳನದ ನಿರ್ಣಯ: ಹೆಮ್ಮಾಡಿ ಕಟ್ಟು ರಸ್ತೆಯ ಚರಂಡಿ ಪುನರಚನೆ ಮಾಡಬೇಕು. ಹೆಮ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು. ಹೆಮ್ಮಾಡಿ ಭಟ್ಟರ ಬೆಟ್ಟು ರಸ್ತೆಯ ದಾರಿದೀಪ ಅಳವಡಿಸಬೇಕೆಂದು ಒತ್ತಾಯಿಸಿ ಸಮ್ಮೇಳನ ದಲ್ಲಿ ನಿರ್ಣಯ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News