ನಾಯಿಗಳ ದಾಳಿಯಿಂದ ಚಿಪ್ಪು ಹಂದಿಯ ರಕ್ಷಣೆ

Update: 2024-10-08 12:27 GMT

ಉಡುಪಿ, ಅ.8: ತೋಟದಲ್ಲಿ ನಾಯಿ ದಾಳಿಗೆ ತುತ್ತಾಗುತ್ತಿದ್ದ ಅಪರೂಪದ ಚಿಪ್ಪು ಹಂದಿಯನ್ನು ಸ್ಥಳೀಯರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ಹಿರೇಬೆಟ್ಟು ಎಂಬಲ್ಲಿ ಸೋಮವಾರ ನಡೆದಿದೆ.

ಹಿರೇಬೆಟ್ಟು ಸಮೀಪದ ಅಂಗಡಿಬೆಟ್ಟು ಎಂಬಲ್ಲಿ ಗೋಳಿ ಮರದ ಕೆಳಗೆ ಕಾಣಿಸಿಕೊಂಡ ಚಿಪ್ಪು ಹಂದಿಯ ಮೇಲೆ ನಾಲ್ಕೈದು ನಾಯಿಗಳು ದಾಳಿ ನಡೆಸುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಈ ನಾಯಿಗಳಿಂದ ಚಿಪ್ಪು ಹಂದಿಯನ್ನು ರಕ್ಷಿಸಿದರು.

ಬಳಿಕ ಅದನ್ನು ಬಡಗುಬೆಟ್ಟುವಿನಲ್ಲಿರುವ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ಅರಣ್ಯ ಪಾಲಕ ದೇವರಾಜ ಪಾಣ ಅವರ ಮೂಲಕ ಇಲಾಖೆಗೆ ಒಪ್ಪಿಸಲಾಯಿತು. ಇಲಾಖೆಯವರು ಅದನ್ನು ಹೆಬ್ರಿ ಸಮೀಪದ ಅರಣ್ಯದಲ್ಲಿ ಬಿಟ್ಟರೆಂದು ತಿಳಿದುಬಂದಿದೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಹಿರೇಬೆಟ್ಟು ಗ್ರಾಪಂ ಸದಸ್ಯ ಯತೀಶ್ ಶೆಟ್ಟಿ, ಸ್ಥಳೀಯರಾದ ಅನೂಪ್ ಶೆಟ್ಟಿ, ರಾಜೇಶ್, ಮನೋಜ್, ರಂಗಣ್ಣ, ಶ್ರೀಕಾಂತ್, ಹರೀಶ್, ಜಗ್ಗು, ರವಿರಾಜ್, ಅಭಿಷೇಕ್, ರವಿ ಪೂಜಾರಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News