ಕಸ್ತೂರಿರಂಗನ್ ವರದಿ| ಕೇಂದ್ರ ತನ್ನ ನಿಲುವು ಬದಲಿಸಲಿ: ವಿನಯ ಕುಮಾರ್ ಸೊರಕೆ

Update: 2024-10-08 13:22 GMT

ಕುಂದಾಪುರ, ಅ.8: ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕೇಂದ್ರ ಸರಕಾರ ನಾವು ಈ ಹಿಂದೆ ಕಳುಹಿಸಿದ ತೀರ್ಮಾನ ವನ್ನು ಒಪ್ಪದೇ, ಅದನ್ನು ಅನುಷ್ಠಾನ ಮಾಡಲೇಬೇಕು ಎಂಬ ಅಭಿಪ್ರಾಯಕ್ಕೆ ಬಂದಿದೆ. ರಾಜ್ಯ ಸರಕಾರ ಈಗಾಗಲೇ ಈ ವರದಿ ಅನುಷ್ಠಾನ ಸಾಧ್ಯವಿಲ್ಲ ಎಂದು ಹೇಳಿದೆ. ಅದೇ ರೀತಿ ಕೇಂದ್ರ ಸರಕಾರವು ತನ್ನ ನಿಲುವನ್ನು ಬದಲಿಸಲಿ. ಜಿಲ್ಲೆಯ ಶಾಸಕರು, ಸಂಸದರು ಜನಾಭಿಪ್ರಾಯವನ್ನು ಕೇಂದ್ರದ ಗಮನಕ್ಕೆ ತರುವಂತಹ ಕಾರ್ಯ ಮಾಡಲಿ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ತ್ರಾಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಉಸ್ತುವಾರಿ ಸಚಿವನಾಗಿದ್ದ ವೇಳೆ 16 ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿ, ಜನರ ಅಭಿಪ್ರಾಯವನ್ನು ಪಡೆದು, ಜಿಲ್ಲೆಯಿಂದ ಈ ವರದಿ ಜಾರಿ ಬೇಡವೆಂದು ಸರಕಾರಕ್ಕೆ ವರದಿ ಸಲ್ಲಿಸ ಲಾಗಿತ್ತು. ಇತ್ತೀಚೆಗೆ ಅರಣ್ಯ ಸಚಿವರಿಗೂ ಈ ನಾನು ಈ ಬಗ್ಗೆ ಮನವರಿಕೆ ಮಾಡಿದ್ದೇನೆ. ಈ ವರದಿ ಜಾರಿಯಿಂದ ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳಲ್ಲಿ ಜನ ವಲಸೆ ಹೋಗುವ ಪರಿಸ್ಥಿತಿಯಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲ್ಲ ಎಂದವರು ತಿಳಿಸಿದರು.

ಜಾತಿ ಗಣತಿ ಬಗ್ಗೆ ಬಿಜೆಪಿ- ಜೆಡಿಎಸ್ ಪಕ್ಷದವರು ಮಾತ್ರ ಅಪಸ್ವರ ಎತ್ತಿರುವುದು. ಮುಡಾ ಹಗರಣ ಮುಚ್ಚಿ ಹಾಕಲು ಈ ಜಾತಿ ಗಣತಿ ಮುನ್ನೆಲೆಗೆ ಬಂದಿದೆ ಎಂಬ ವಿಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮುಡಾ ಹಗರಣಕ್ಕಿಂತಲೂ ಮೊದಲೇ ಅಂದರೆ ಸಿದ್ದರಾಮಯ್ಯ ಅವರ ಹಿಂದಿನ ಸರಕಾರದ ಅವಧಿಯಲ್ಲಿಯೇ ಜಾತಿ ಗಣತಿ ವಿಚಾರ ಆರಂಭ ವಾಗಿತ್ತು ಎಂದು ಸೊರಕೆ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News