ಕುಂದಾಪುರ: ಎನ್.ಎನ್.ಒ. ಕಮ್ಯೂನಿಟಿ ಸೆಂಟರ್ ನಿಂದ ಸಹಾಯಧನ ಹಸ್ತಾಂತರ, ಸನ್ಮಾನ ಕಾರ್ಯಕ್ರಮ

Update: 2024-10-13 04:18 GMT

ಕುಂದಾಪುರ: ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ, ಬೈತುಲ್ ಮಾಲ್ ಹಂಗಾರಕಟ್ಟೆ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ, ತವಕ್ಕಲ್ ಯಂಗ್ ಮೆನ್ಸ್ ಅಸೋಸಿಯೇಶನ್ ಕಟಪಾಡಿ, ಟೀಂ ಮಲೆನಾಡು ಹ್ಯುಮಾನಿಟೇರಿಯನ್ ಟ್ರಸ್ಟ್, ಬೆಳ್ವೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಹಾಯಧನ ಹಸ್ತಾಂತರ ಹಾಗೂ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು.

ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಫಾರ್ಮಾ ಡಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಕುಂದಾಪುರ ಕಟ್ಟೇರಿ ನಿವಾಸಿ ಅಜ್ಞಾಲುನ್ನಿ ಸಾರ ಅವರಿಗೆ ಸಹಾಯಧನ

ಹಸ್ತಾಂತರಿಸಲಾಯಿತು. ಇತ್ತೀಚೆಗಷ್ಟೇ ಸ್ವಾಮಿ ವಿವೇಕಾನಂದ ಪ್ರಶಸ್ತಿ ಪಡೆದ ಎಂ.ಇಕ್ಬಾಲ್ ಮನ್ನಾ ಉಡುಪಿ ಅವರಿಗೆ ಕುಂದಾಪುರ ಎನ್.ಎನ್.ಒ. ಕಮ್ಯೂನಿಟಿ ಸೆಂಟರ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕೋಡಿ ಬ್ಯಾರೀಸ್ ಕಾಲೇಜಿನ ಬಿಸಿಎ ವಿಭಾಗದಲ್ಲಿ 100 ಶೇ. ಫಲಿತಾಂಶ ದಾಖಲಿಸಿದ ವಿದ್ಯಾರ್ಥಿನಿ ಸಫಾಝ್, ಐದು ವಿಷಯಗಳಲ್ಲಿ ನೂರು ಶೇ. ಅಂಕ ಗಳಿಸಿರುವ ಆಯಿಶ ಸಿದ್ದೀಕ್ ರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಹುಸೈನ್ ಹೈಕಾಡಿ ಮಾತನಾಡಿ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ವಿವರಿಸಿದರು.

ಕೋಡಿ - ಕುಂದಾಪುರ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಮಾತನಾಡಿ, ಎನ್.ಎನ್. ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಕೋಶಾಧಿಕಾರಿ ಪೀರ್ ಸಾಹೇಬ್, ಹಂಗಾರಕಟ್ಟೆ ಬೈತುಲ್ ಮಾಲ್ ಖಜಾಂಚಿ ಜವಾನ್ ಅಕ್ಬರ್, ಕಟಪಾಡಿ ತವಕ್ಕಲ್ ಯಂಗ್ ಮೆನ್ಸ್ ಅಸೋಸಿಯೇಶನ್ ಕಟಪಾಡಿ ಅಧ್ಯಕ್ಷ ಯು.ಎ.ರಶೀದ್, ಟೀಮ್ ಮಲೆನಾಡು ಹ್ಯುಮಾನಿಟೇರಿಯನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಅಜೆಕಾರು, ನಮ್ಮ ನಾಡ ಒಕ್ಕೂಟದ ಉಡುಪಿ ಪ್ರಧಾನ ಕಾರ್ಯದರ್ಶಿ ಝಹೀರ್ ನಾಕುದ್, ಬೆಳ್ವೆ ಟೀಮ್ ಮಲೆನಾಡು ಹ್ಯುಮಾನಿಟೇರಿಯನ್ ಟ್ರಸ್ಟ್ ನ ಟ್ರಸ್ಟಿಗಳಾದ ಮುಹಮ್ಮದ್ ರಯಾನ್ ಬೆಳ್ವೆ , ಅನ್ವರ್ ಕಂಡ್ಲೂರು, ಎನ್ ಎನ್ ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ಉಪಾಧ್ಯಕ್ಷರಾದ ಜಮಾಲ್ ಗುಲ್ವಾಡಿ ಮುಹಮ್ಮದ್ ಗುಲ್ವಾಡಿ, ಶಾಕಿರ್ ಹಾವಂಜೆ, ನಮ್ಮ ನಾಡ ಒಕ್ಕೂಟ ಜಿಲ್ಲಾ ಯುವ ಸಂಯೋಜಕ ಅಬ್ದುಲ್ ಖಾದರ್ ಮುಡುಗೋಪಾಡಿ, ಜಿಲ್ಲಾ ಸಮಿತಿಯ ಸದಸ್ಯ ಮನ್ಸೂರ್ ಇಬ್ರಾಹೀಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಟೀಮ್ ಮಲೆನಾಡು ಹ್ಯುಮಾನಿಟೇರಿಯನ್ ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ಶುಕೂರ್ ಬೆಳ್ವೆ ಸಹಕರಿಸಿದರು.

ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹುಸೈನ್ ಹೈಕಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಮ್ಮ ನಾಡ ಒಕ್ಕೂಟ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಸದಸ್ಯ ಪಳ್ಳಿ ಉಸ್ಮಾನ್ ಗುಲ್ವಾಡಿ ಕಾರ್ಯಕ್ರಮ

ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News