ಉಡುಪಿ: ಅಕ್ರಮ ಬಾಂಗ್ಲಾ ವಲಸಿಗರ ವಿಚಾರಣೆ ಮುಂದುವರಿಕೆ

Update: 2024-10-15 15:28 GMT

ಉಡುಪಿ, ಅ.15: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಏಳು ಮಂದಿ ಬಾಂಗ್ಲಾ ದೇಶದ ಅಕ್ರಮ ವಲಸಿಗರ ವಿಚಾರಣೆ ಮುಂದುವರೆದಿದ್ದು, ಇವರಿಂದ ಪೊಲೀಸರು ಹಲವು ಮಾಹಿತಿಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳಾದ ಬಾಂಗ್ಲಾದೇಶದ ಹಕೀಮ್ ಅಲಿ, ಸುಜೋನ್ ಎಸ್.ಕೆ. ಫಾರೂಕ್, ಇಸ್ಮಾಯಿಲ್ ಎಸ್.ಕೆ., ಕರೀಮ್ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ., ಸೋಜಿಬ್ ಎಂಬವರು ಕಟ್ಟಡ ಕಾರ್ಮಿಕರಾಗಿ ಕಾರ್ಮಿಕ ಇಲಾಖೆಯಲ್ಲಿ ನೊಂದಾಣೆ ಮಾಡಿಕೊಂಡಿಲ್ಲ ಎಂಬುದು ಪೊಲೀಸ್ ತನಿಖೆ ವೇಳೆ ಖಚಿತ ಪಟ್ಟಿದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

ಅದೇ ರೀತಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ ಮನೆ ಮಾಲಕರು, ಕೆಲಸ ನೀಡಿದ ಮಾಲಕರ ವಿಚಾರಣೆಯನ್ನು ಕೂಡ ಪೊಲೀಸರು ಮುಂದು ವರೆಸಿದ್ದಾರೆ. ಹೀಗೆ ವಿವಿಧ ಧಿಕ್ಕಿನಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News