ದುರ್ಗಾ ಮೆನನ್‌ಗೆ ಪಿ.ಎಚ್.ಡಿ ಪದವಿ

Update: 2024-10-18 13:55 GMT

ಉಡುಪಿ, ಅ.18: ವಿಶ್ವ ವಿದ್ಯಾನಿಲಯ, ಸಂಧ್ಯಾ ಕಾಲೇಜಿನ ಕನ್ನಡ ಉಪನ್ಯಾಸಕಿ ದುರ್ಗಾ ಮೆನನ್ ಆರ್. ಉಡುಪಿ ಡಾ.ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ ಮಾರ್ಗದರ್ಶನದಲ್ಲಿ ಮಂಡಿಸಿರುವ ‘ಸ್ಥಿತ್ಯಂತರಗೊಳ್ಳುತ್ತಿರುವ ತುಳುನಾಡಿನ ವಾರ್ಷಿಕ ಆವರ್ತ ನದ ಆಚರಣೆಗಳು’ ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮಾಹೆ ವಿಶ್ವವಿದ್ಯಾ ನಿಲಯ ಪಿ.ಎಚ್.ಡಿ ಪದವಿ ನೀಡಿದೆ.

ಇವರು ಶಕ್ತಿನಗರದ ದಿ|ರಮೇಶ್ ಹಾಗೂ ಅಮ್ಮಣಿ ದಂಪತಿ ಪುತ್ರಿ ಹಾಗೂ ಯೆಯ್ಯಾಡಿ ನಿವಾಸಿ ರವಿಕುಮಾರ್ ಪತ್ನಿ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News