ಶ್ರೀಕ್ಷೇತ್ರ ಬಂಟಕಲ್ಲು ಆಡಳಿತ ಮೊಕ್ತೇಸರರಾಗಿ ಜಯರಾಮ್ ಪ್ರಭು ಆಯ್ಕೆ

Update: 2024-10-18 14:03 GMT

ಶಿರ್ವ, ಅ.18: ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮೊಕ್ತೇಸರರಾಗಿ ಸೂಡ ಗಂಪದಬೈಲು ಜಯರಾಮ ಪ್ರಭು, ಅಧ್ಯಕ್ಷರಾಗಿ ಉಮೇಶ್ ಪ್ರಭು ಪಾಲಮೆ, ಉಪಾಧ್ಯಕ್ಷರಾಗಿ ಎಳ್ಳಾರೆ ಪಾಂಡುರಂಗ ಕಾಮತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿ ಸದಸ್ಯರುಗಳಾಗಿ ಶಶಿಧರ ವಾಗ್ಲೆ ಸಡಂಬೈಲು, ಸಂತೋಷ್ ವಾಗ್ಲೆ ಪಳ್ಳಿ, ಸುರೇಂದ್ರ ನಾಯಕ್ ಬೆಳಂಜಾಲೆ, ಶಿವರಾಮ ನಾಯಕ್ ಮೂಡುಬೆಳ್ಳೆ, ಉಮೇಶ ನಾಯಕ್ ಪೆರ್ನಂಕಿಲ, ಸತ್ಯನಾರಾಯಣ ನಾಯಕ್ ಆತ್ರಾಡಿ, ಗಣಪತಿ ಧೋಂಡ್ಯೆ ಮಂಚಿ, ವಿಠಲ್ ಮಡ್ಕೇಕಾರ್ ಸಗ್ರಿ, ಉದಯ ಪ್ರಭು ಸಾಗು, ರಾಮದಾಸ್ ಪ್ರಭು ಕಕ್ಕುದಕಟ್ಟೆ, ದೇವದಾಸ್ ಪಾಟ್ಕರ್ ಮುದರಂಗಡಿ, ರಾಮಣ್ಣ ಪ್ರಭು ಕುಕ್ಕೆಹಳ್ಳಿ ಆಯ್ಕೆಗೊಂಡರು.

ಇತ್ತೀಚೆಗೆ ಶ್ರೀಕ್ಷೇತ್ರದ ಸಭಾಂಗಣದಲ್ಲಿ ಜರಗಿದ ಸರ್ವ ಸದಸ್ಯಸರ ಮಹಾ ಸಭೆಯಲ್ಲಿ 2024-25ರಿಂದ 2029-30ರ ಅವಧಿಗೆ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಗಳು ನಡೆದವು. ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕ ಸೂಡ ದೇವೇಂದ್ರ ಬೋರ್ಕಾರ್ ಶಿರ್ವ ವಹಿಸಿದ್ದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ ವರದಿ ಮಂಡಿಸಿದರು, ಎಳ್ಳಾರೆ ಪಾಂಡುರಂಗ ಕಾಮತ್ ಲೆಕ್ಕಪತ್ರ ಮಂಡಿಸಿದರು. ಅಧ್ಯಕ್ಷ ಜಯರಾಮ ಪ್ರಭು ಶಾಲಾ ಲೆಕ್ಕಪತ್ರ ಮಂಡಿಸಿದರು. ಸತ್ಯನಾರಾಯಣ ನಾಯಕ್ ಅಂದಾಜು ಬಜೆಟ್ ಮಂಡಿಸಿದರು. ನಿತ್ಯಪೂಜೆ, ನಿತ್ಯಭೋಜನದ ಲೆಕ್ಕಪತ್ರ ವಿಠಲ ಮಡ್ಕೇಕಾರ್ ಮಂಡಸಿಸಿದರು.

ಸಭೆಯಲ್ಲಿ ಕೆ.ಆರ್.ಪಾಟ್ಕರ್, ಬಿ.ಪುಂಡಲೀಕ ಮರಾಠೆ, ವೇದಮೂರ್ತಿ ರಂಜಿತ್ ಭಟ್, ಹರೀಶ್ ಪಾಟ್ಕರ್ ಬೆಳಂಜಾಲೆ, ಚಂದ್ರಕಾಂತ್ ನಾಯಕ್ ಪಾಂಜೆಗುಡ್ಡೆ, ಶ್ರೀಕಾಂತ್ ಕಾಮತ್ ಹಿರಿಯಡ್ಕ, ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರುಗಳಾದ ಸರಳೇಬೆಟ್ಟು ರಮಾನಾಥ್ ನಾಯಕ್, ಗಣಪತಿ ನಾಯಕ್ ಮಂಚಿ, ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್‌ಕಾರ್ ಅಲೆವೂರು, ಕ್ಷೇತ್ರದ ಸದಸ್ಯರು ಉಪಸ್ಥಿತರಿದ್ದರು. ಉಮೇಶ್ ನಾಯಕ್ ಪೆರ್ನಂಕಿಲ ನಿರೂಪಿಸಿದರು. ಸಂತೋಷ್ ನಾಯಕ್ ಪಳ್ಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News