ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದನೆ: ದಿನಕರ ಹೆರೂರು

Update: 2024-11-06 15:33 GMT

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಉಡುಪಿಯ ಜನತೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯನಿರ್ವಹಿಸಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲಾಗುವುದು ಎಂದು ಪ್ರಾಧಿಕಾರದ ನೂತನ ಅಧ್ಯಕ್ಷ ದಿನಕರ ಹೆರೂರು ಹೇಳಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ಕಾಂಗ್ರೆಸ್ ಪಕ್ಷವು ಯಾವತ್ತು ಕಾರ್ಯಕರ್ತರನ್ನು ಮರೆಯದೆ ಕಾರ್ಯ ಕರ್ತರ ಬೆಂಗಾವಲಾಗಿ ಇದೆ ಎಂಬುದಕ್ಕೆ ಸಾಕ್ಷಿ ದಿನಕರ್ ಹೇರೂರು ಸಾಕ್ಷಿ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಇವರನ್ನು ಕಾಂಗ್ರೆಸ್ ಗುರುತಿಸಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ಸುರೇಶ್ ಶೆಟ್ಟಿ ಬನ್ನಂಜೆ ವಹಿಸಿದ್ದರು. ಸಭೆಯಲ್ಲಿ ಪಂಚಾಯತ್ ಸಂಘಟನೆ ಪದಾಧಿಕಾರಿಗಳಾದ ರಮಾ ಕುಕ್ಕಿಕಟ್ಟೆ, ಸದಾನಂದ ಕಿನ್ನಿಮುಲ್ಕಿ, ಉದಯ ಪೂಜಾರಿ ಪಂದುಬೆಟ್ಟು, ಯೋಗೀಶ್ ಮೂಡಬೆಟ್ಟು, ಮಹೇಶ್ ಮೂಡಬೆಟ್ಟು, ಅನ್ವರ್ ಕುಕ್ಕಿಕಟ್ಟೆ, ಸಾಯಿರಾಜ್ ಕೋಟ್ಯಾನ್, ಸುಕನ್ಯಾ ಪೂಜಾರಿ, ಕಮಲ್ ಮಲ್ಪೆ, ಸುರೇಂದ್ರ ಆಚಾರ್ಯ ಕಾಡುಬೆಟ್ಟು, ಸುರೇಂದ್ರ ನಿಟ್ಟೂರು, ಉದಯ ಆಚಾರ್ಯ, ಸೂರ್ಯ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.

ಶೇಖರ್ ಶೆಟ್ಟಿ ಸ್ವಾಗತಿಸಿದರು. ಅನಿಲ್ ಕುಮಾರ್ ಹೆರ್ಗ ವಂದಿಸಿದರು. ಸುರೇಶ್ ತೆಂಕನಿಡಿಯೂರು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News