ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಟೆಕ್-ಕ್ವೆಸ್ಟ್

Update: 2024-11-06 16:08 GMT

ಶಿರ್ವ, ನ.6: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ಐಟಿ ಕ್ಲಬ್ , ಇನ್‌ಸ್ಟಿಟ್ಯೂಟಷನ್ ಇನ್ನೋವೇಶನ್ ಕೌನ್ಸಿಲ್ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ‘ಟೆಕ್-ಕ್ವೆಸ್ಟ್’ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಫಾದರ್ ಹೆನ್ರಿ ಕ್ಯಾಸ್ಟೆಲಿನೊ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ರಾದ ಡಾ.ಹೆರಾಲ್ಡ್ ಐವನ್ ಮೋನಿಸ್, ಇಂದಿನ ಯುವ ಪೀಳಿಗೆ ವ್ಯಕ್ತಿತ್ವ ವಿಕಸನಕ್ಕಾಗಿ ವಿವಿಧ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಕಲಿಯುವ ಹಾಗೂ ಹೆಚ್ಚೆಚ್ಚು ಒಳ್ಳೆಯ ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಮಾಡುವ ಮೂಲಕ ಉತ್ತಮ ಪ್ರಜೆಗಳಾಗಬೇಕು ಎಂದರು.

ವಿದ್ಯಾರ್ಥಿ ಅನ್ವಿತ ಶಂಕರ್ ಸಾಲಿಯಾನ್ ಆಧುನಿಕ ಕೋಡಿಂಗ್ ಲ್ಯಾಂಗ್ವೇಜ್ ಬಗ್ಗೆ ಮಾಹಿತಿ ನೀಡಿದರೆ, ಮೊಹಮ್ಮದ್ ಆಶಿಕ್ ಫೋಟೋ ಶಾಪ್ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಪವರ್ ಪಾಯಿಂಟ್ ಪ್ರಸೂತಿ ಬಗ್ಗೆ ತರನಮ್ ವಿವರಿಸಿದರು. ಶ್ರೀನಿಧಿ ಹಾಗೂ ಪ್ರತಿಕ್ಷ ದೇವಾಡಿಗ ಐಟಿ ಕ್ವಿಜ್ ನಡೆಸಿಕೊಟ್ಟರು.

ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ, ಐಟಿ ಕ್ಲಬ್ ನಿರ್ದೇಶಕ ಕೆ. ಪ್ರವೀಣ್ ಕುಮಾರ್ ಕಾರ್ಯಗಾರದ ಉದ್ದೇಶವನ್ನು ವಿವರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಇತ್ತೀಚೆ ನಡೆದೆ ಮಂಗಳೂರು ವಿವಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಐಐಸಿ ಸಂಯೋಜಕಿ ರಶ್ಮಿ ಆಚಾರ್ಯ, ಉಪನ್ಯಾಸಕ ರಾದ ಪದ್ಮಶ್ರೀ ಭಟ್, ಪ್ರೀತಿ ಜಯಚಂದ್ರ ಉಪಸ್ಥಿತರಿದ್ದರು. ಐಟಿ ಕ್ಲಬ್ಬಿನ ದೇವಿಕಾ ಶೆಟ್ಟಿ ಸ್ವಾಗತಿಸಿದರೆ, ಗಾಡ್ವಿಲ್ ಡಿಯೋಲ್ ಕರ್ಕಡ ವಂದಿಸಿದರು. ಸ್ಮಿತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News