ಕಾರ್ಕಳ: ರೋಟರಿ ಆಸ್ಪತ್ರೆ ವಿಸ್ತರಣೆಗೆ ಶಂಕುಸ್ಥಾಪನೆ

Update: 2024-11-06 16:07 GMT

ಉಡುಪಿ: ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯ ನೂತನ ಹೊರರೋಗಿ ವಿಭಾಗ (ಒಪಿಡಿ) ಹಾಗೂ ಹೆರಿಗೆ ಕೊಠಡಿ ಸಂಕೀರ್ಣದ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು.

ಕಾರ್ಕಳ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಇನ್ನಷ್ಟು ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶ ದೊಂದಿಗೆ ರೋಟರಿ ಆಸ್ಪತ್ರೆಯ ವಿಸ್ತರಣೆಗೆ ಮುಂದಾಗಿದ್ದು, ಒಪಿಡಿ ಮತ್ತು ಲೇಬರ್ ಥಿಯೇಟರ್ ಸಂಕೀರ್ಣಕ್ಕೆ ಮಣಿಪಾಲ ಅಕಾಡೆಮಿಆಫ್ ಹೈಯರ್ ಎಜುಕೇಶನ್ (ಮಾಹೆ) ನ ಟ್ರಸ್ಟಿ ವಸಂತಿ ಆರ್ ಪೈ ಶಿಲಾನ್ಯಾಸ ನೆರವೇರಿಸಿದರು.

ಈ ಸಂಕೀರ್ಣ ಸಾಮಾನ್ಯ ಮತ್ತು ಸೂಪರ್-ಸ್ಪೆಷಾಲಿಟಿ ಸೇವೆಗಳಿಗಾಗಿ ಸಮಾಲೋಚನಾ ಕೊಠಡಿಗಳನ್ನು ಒಳಗೊಂಡಿದೆ. ರೋಗಿಗಳಿಗೆ ಹೆಚ್ಚು ಆರಾಮದಾಯಕ ಕಾಯುವ ಪ್ರದೇಶಗಳನ್ನು ನಿರ್ಮಿಸಲಾಗುತ್ತದೆ. 2025ರ ಎಪ್ರಿಲ್ ವೇಳೆಗೆ ಸೌಲಭ್ಯ ಕಾರ್ಯಾರಂಭ ಮಾಡಲಿದೆ.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್, ಕುಲಪತಿ ಲೆ.ಜ.(ಡಾ.) ಎಂ.ಡಿ. ವೆಂಕಟೇಶ್, ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಒಒ ದಿಲೀಪ್ ಜೋಸ್, ಮಾಹೆ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ಕುಮಾರ್ ರಾವ್, ಮುಖ್ಯ ನಿರ್ವಹಣಾ ಅಧಿಕಾರಿ ಡಾ. ರವಿರಾಜ್ ಎನ್.ಎಸ್., ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಸಿಓಓ ಡಾ.ಆನಂದ್ ವೇಣುಗೋಪಾಲ್ ಹಾಗೂ ಇತರರು ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗ್ಲೆ, ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಭಾಗವಹಿಸಿದ್ದರು. ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News