ಮಹಿಳೆಯ ಸರ ಅಪಹರಣ: ಪ್ರಕರಣ ದಾಖಲು
Update: 2025-03-18 22:30 IST

ಬ್ರಹ್ಮಾವರ, ಮಾ.18: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನ ಸರ ಸುಲಿಗೆ ಮಾಡಿರುವ ಘಟನೆ ಹೊಸಾಳ ಗ್ರಾಮದ ಚೌಳಿಕೆರೆ ಬನಶಂಕರಿ ದೇವಸ್ಥಾನದ ಎದುರು ಮಾ.15ರಂದು ಸಂಜೆ ವೇಳೆ ನಡೆದಿದೆ.
ಹೊಸಾಳ ಗ್ರಾಮದ ವಸಂತಿ (58) ಎಂಬವರು ಬಾರಕೂರು ಮಹಿಷಾಸುರ ದೇವಸ್ಥಾನದ ಹಬ್ಬಕ್ಕೆ ಹೋಗಿ ವಾಪಾಸ್ಸು ಮನೆ ಕಡೆಗೆ ಬಾರ್ಕೂರು -ಯಡ್ತಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಯಡ್ತಾಡಿ ಕಡೆಯಿಂದ ಬಾರ್ಕೂರು ಕಡೆಗೆ ಬೈಕಿನಲ್ಲಿ ಬಂದ ವ್ಯಕ್ತಿ, ವಸಂತಿ ಅವರ ಕುತ್ತಿಗೆಯಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ಸುಲಿಗೆ ಮಾಡಿಕೊಂಡು ಪರಾರಿಯಾದನು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.