ಉತ್ತರ ಪ್ರದೇಶದ ಕಾರ್ಮಿಕ ನಾಪತ್ತೆ
Update: 2025-03-22 21:22 IST

ಮಣಿಪಾಲ, ಮಾ.22: ಮದುವೆ ನಿಶ್ಚಯವಾಗಿದ್ದ ಉತ್ತರ ಪ್ರದೇಶದ ಕಾರ್ಮಿಕ ದೀಪಕ್ ನಿಶಾದ್(26) ಎಂಬವರು ಉಡುಪಿಯಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಇವರು ಕಳೆದ 3 ತಿಂಗಳಿನಿಂದ ಉಡುಪಿ ಕಲ್ಸಂಕದಲ್ಲಿ ಬಿಲ್ಡಿಂಗ್ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದರು. ಇವರ ಮದುವೆ ನಿಶ್ಚಯವಾಗಿದ್ದು ಮದುವೆ ತಯಾರಿ ಬಗ್ಗೆ ಉಡುಪಿಯಿಂದ ತನ್ನ ಸ್ವಂತ ಊರಿಗೆ ಹೋಗುವುದಾಗಿ ಹೇಳಿ ಮಾ.3ರಂದು ರಾತ್ರಿ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ಆದರೆ ಅವರು ಊರಿಗೂ ಹೋಗದೇ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.