ಮನೆಗೆ ನುಗ್ಗಿ ಚಿನ್ನದ ಸರ ಕಳವು
Update: 2025-03-22 21:29 IST

ಸಾಂದರ್ಭಿಕ ಚಿತ್ರ
ಕೋಟ, ಮಾ.22: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನದ ಸರ ಕಳವು ಮಾಡಿರುವ ಘಟನೆ ಮಾ.20ರಂದು ರಾತ್ರಿ ವೇಳೆ ಮಣೂರು ಗ್ರಾಮದಲ್ವಲಿ ನಡೆದಿದೆ.
ಶ್ರೀಧರ ಎಂಬವರು 92 ವರ್ಷ ಪ್ರಾಯದ ಅತ್ತೆಯನ್ನು ಮನೆಯಲ್ಲಿ ಮಲಗಿಸಿ, ಬೀಗ ಹಾಕಿ ಕೊಯ್ಕೋರ್ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅತ್ತೆಯು ಮಲಗುವಾಗ ಕಳಚಿ ಇಟ್ಟಿದ್ದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.