ಏಡ್ಸ್ ಜಾಗೃತಿ ಕಾರ್ಯಕ್ರಮ- ಪೋಸ್ಟರ್ ತಯಾರಿಕೆ ಸ್ಪರ್ಧೆ

ಉಡುಪಿ, ಮಾ.23: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಮುದಾಯ ಸೇವಾ ವಿಭಾಗ, ಯೂತ್ ರೆಡ್‌ಕ್ರಾಸ್ ಘಟಕವು ದ್ರವ್ಯ ಗುಣ ವಿಭಾಗದ ಸಹಯೋಗದೊಂದಿಗೆ ಏಡ್ಸ್ ಕುರಿತು ಅತಿಥಿ ಉಪನ್ಯಾಸ ಮತ್ತು ಜಾಗೃತಿ ಕಾರ್ಯಕ್ರಮ ಹಾಗೂ ಪೋಸ್ಟರ್ ತಯಾರಿಕೆ ಸ್ಪರ್ಧೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಮಾತನಾಡಿ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸು ವುದು ಕೇವಲ ಸರ್ಕಾರದ ಕರ್ತವ್ಯವಲ್ಲ, ಆಯುಷ್ ವೈದ್ಯರ ಜವಾಬ್ದಾರಿಯೂ ಆಗಿದೆ. ಪ್ರತಿಯೊಬ್ಬ ಆರ್ಯು ವೇದ ವೈದ್ಯರು ಕನಿಷ್ಟ ಒಬ್ಬ ವ್ಯಕ್ತಿಗೆ ಏಡ್ಸ್ ಬಗ್ಗೆ ಶಿಕ್ಷಣ ನೀಡಬೇಕು. ಆದ್ದರಿಂದ ಇದು ಸಮುದಾಯಕ್ಕೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಎಂದರು.
ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವಿಭಾಗದ ಸಂಪನ್ಮೂಲ ವ್ಯಕ್ತಿ ಡಾ.ಮಹಾಬಲೇ ಶ್ವರ್ ಏಡ್ಸ್ ಜಾಗೃತಿ ಮತ್ತು ತಡೆಗಟ್ಟುವಿಕೆ ಬಗ್ಗೆ ಮಾತನಾಡಿದರು. ದ್ರವ್ಯಗುಣ ವಿಭಾಗದ ಸಹಪ್ರಾಧ್ಯಾ ಪಕ ಡಾ.ಮೊಹಮ್ಮದ್ ಫೈಸಲ್ ಏಡ್ಸ್ ನಿರ್ವಹಣೆಯಲ್ಲಿ ಔಷಧೀಯ ಸಸ್ಯಗಳ ಪಾತ್ರವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ನಡೆಸಲಾದ ಪೋಸ್ಟರ್ ತಯಾರಿಕೆ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮುದಾಯ ಸೇವಾ ಮುಖ್ಯಸ್ಥೆ ಡಾ. ವಿದ್ಯಾಲಕ್ಷ್ಮಿ ಕೆ., ಎನ್‌ಎಸ್‌ಎಸ್ ಅಧಿಕಾರಿ ಶ್ರೀನಿಧಿ ಧನ್ಯ, ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕಿ ಡಾ.ಸುಮಾ ವಿ.ಮಲ್ಯ, ಯೂತ್ ರೆಡ್‌ಕ್ರಾಸ್ ಸದಸ್ಯರಾದ ಡಾ. ಅನಿರುದ್ಧ, ಡಾ.ರಶ್ಮಿ ಎನ್.ಆರ್., ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ತೇಜಸ್ವಿ ಐ.ನಾಯ್ಕ್, ಡಾ.ಪೂರ್ಣಿಮಾ ಎ., ಮಾನಸರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪುನೀತ್ ಪಿ. ಉಪಸ್ಥಿತರಿದ್ದರು.