ಸುನೈನಾ ಪಾಟೀಲ್‌ಗೆ ಪಿಎಚ್‌ಡಿ ಪದವಿ

Update: 2023-07-21 13:52 GMT

ಶಿರ್ವ, ಜು.21: ಸುರತ್ಕಲ್ ಎನ್‌ಐಟಿಕೆಯ ಸಂಶೋಧನಾ ವಿದ್ಯಾರ್ಥಿನಿ ಸುನೈನಾ ಪಾಟೀಲ್(ಶುೃತಿ ಶ್ರೀರಾಮ್ ಮರಾಠೆ) ಎನ್‌ಐಟಿಕೆ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ.ಹರಿಪ್ರಸಾದ್ ದಾಸರಿ ಮಾರ್ಗದರ್ಶನದಲ್ಲಿ ಮಂಡಿಸಿದ ಮಸಿ ಆ್ಯಕ್ಸಿಡೀಕರಣ ಚಟುವಟಿಕೆ ಮತ್ತು ಅದರ ಚಲನಶಾಸ್ತ್ರಕ್ಕೆ ಸಿರಿಯ ಪ್ರಸಿಯೋಡೈಮಿಯಮ್ ವೇಗವರ್ಧಕದಲ್ಲಿ ಪರಿವರ್ತನೆಯ ಲೋಹದ ಡೊಪಾಂಟ್‌ಗಳ ಪರಿಣಾಮದ ಮೇಲೆ ಅಧ್ಯಯನ ವಿಷಯದ ಮಹಾ ಪ್ರಬಂಧಕ್ಕೆ ಪ್ರತಿಷ್ಠಿತ ಎನ್‌ಐಟಿಕೆ ಸುರತ್ಕಲ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರು ಕೆಮಿಕಲ್ ಪ್ಲಾಂಟ್ ಡಿಸೈನ್ ಹಾಗೂ ಇಂಡಸ್ಟ್ರಿಯಲ್ ಪೊಲ್ಯೂಶನ್ ಕಂಟ್ರೋಲ್ ಎರಡೂ ವಿಷಯದಲ್ಲಿ ಎನ್‌ಐಟಿಕೆಯಲ್ಲಿ ಎಂ.ಟೆಕ್ ಪದವಿ ಗಳಿಸಿದ್ದಾರೆ. ಇವರು ನಿಟ್ಟೆ ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ.ಶ್ರೀರಾಮ್ ಪಿ.ಮರಾಠೆ ಬಂಟಕಲ್ಲು ಇವರ ಪತ್ನಿ ಹಾಗೂ ಕಲುಬುರ್ಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಶಿವಶರಣ ಪಾಟೀಲ್, ನಿರ್ಮಾಲಾ ದಂಪತಿ ಪುತ್ರಿ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News