ಅಂದರ್‌ಬಾಹರ್: ಜುಗಾರಿ ಆಡುತ್ತಿದ್ದ ಇಬ್ಬರ ಬಂಧನ

Update: 2025-01-05 17:43 GMT

ಸಾಂದರ್ಭಿಕ ಚಿತ್ರ (credit: Meta AI)

ಕುಂದಾಪುರ: ಕಟ್‌ಬೆಲ್ತೂರು ಹರೆಗೋಡು ಕ್ರಾಸ್‌ನಲ್ಲಿರುವ ಹಾಡಿಯಲ್ಲಿ ಜ.4ರಂದು ರಾತ್ರಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಇಬ್ಬರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ವಕ್ವಾಡಿ ಗ್ರಾಮದ ಸದಾನಂದ(44) ಹಾಗೂ ಕಟ್‌ಬೆಲ್ತೂರು ಗ್ರಾಮದ ಗಂಗಾಧರ(49) ಬಂಧಿತ ಆರೋಪಿಗಳು. ಈ ವೇಳೆ ಕಟ್‌ಬೆಲ್ತೂರು ಗ್ರಾಮದ ಸಂಜೀವ, ರಜತ, ಬಗ್ವಾಡಿ ಗ್ರಾಮದ ಸೋನು ಓಡಿ ಪರಾರಿ ಯಾಗಿದ್ದಾರೆ. ಬಂಧಿತರಿಂದ ಒಟ್ಟು 17,200ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News