ಉಡುಪಿ: ಸೋಮೇಶ್ವರದಲ್ಲಿ 11:50ರ ವೇಳೆ ಶೇ.55 ಮತದಾನ

Update: 2024-04-26 07:11 GMT

ಉಡುಪಿ, ಎ.26: ಜಿಲ್ಲೆಯ ನಕ್ಸಲ್ ಬಾಧಿತ ಮತಗಟ್ಟೆಗಳಲ್ಲಿ ಒಂದಾದ ನಾಡ್ಪಾಲು ಸೋಮೇಶ್ವರ ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 11:50ರ ವೇಳೆಗೆ ದಾಖಲೆಯ ಶೇ.55.43 ಮತದಾನವಾಗಿದೆ.

ಈ ಮತಗಟ್ಟೆಯಲ್ಲಿ 6,71 ಮಂದಿ ಮತದಾರರಿದ್ದು, ಈ ಪೈಕಿ 3,72 ಮಂದಿ ಈಗಾಗಲೇ ಮತ ಚಲಾಯಿಸಿದ್ದಾರೆ. 187 ಮಂದಿ ಪುರುಷರು 1,85 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದವರಲ್ಲಿ ಸೇರಿದ್ದಾರೆ.

ನಾಡ್ಪಾಲಿನ 85 ವರ್ಷ ಪ್ರಾಯದ ಕಮಲ ಶೆಟ್ಟಿ ಹಾಗೂ ಬಡಾ ತಿಂಗಳೆಯ ಆನಂದ ಶೆಟ್ಟಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಬಂದು ಮತ ಹಾಕಿದರು.

ಸೋಮೇಶ್ವರ ಪೇಟೆ ಮತಗಟ್ಟೆಯಲ್ಲಿ ಬೆಳಗ್ಗೆ ಒಂದು ಗಂಟೆ ವಿಳಂಬವಾಗಿ ಮತದಾನ ಆರಂಭವಾಯಿತು. ಮೊದಲ ಮತ ಹಾಕುವಾಗ ಯಂತ್ರ ಕೈಕೊಟ್ಟು ಒಂದು ಗಂಟೆ ಮತದಾನ ಸಾಧ್ಯವಾಗಲಿಲ್ಲ. ಅಧಿಕಾರಿಗಳು ತಂತ್ರಜ್ಞರೊಂದಿಗೆ ಬಂದು ಯಂತ್ರ ದುರಸ್ತಿ ಮಾಡಿದ ಬಳಿಕ ಮತದಾನ ಪ್ರಾರಂಭಗೊಂಡಿತು. ಈ ವೇಳೆ ಮತದಾನಕ್ಕೆ ಬಂದ 25 ಮಂದಿ ಮತಹಾಕದೇ ಮರಳಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ

ಕ್ಷೇತ್ರದಲ್ಲಿ 11 ಗಂಟೆಗೆ ಶೇ.29.03 ಮತದಾನವಾಗಿದೆ ಎಂದು ಅದಿಕೃತವಾಗಿ ಪ್ರಕಟಿಸಲಾಗಿದೆ. ಕುಂದಾಪುರದಲ್ಲಿ ಶೇ.32.77, ಕಾಪುವಲ್ಲಿ ಶೇ.32.35, ಕಾರ್ಕಳದಲ್ಲಿ ಶೇ.31.77, ಉಡುಪಿ ಶೇ.30.27ಮತದಾನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News