ಉಡುಪಿ ನಗರಸಭೆ ಉಪಚುನಾವಣೆ: ಮೂಡು ಪೆರಂಪಳ್ಳಿ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು

Update: 2023-12-30 04:19 GMT

ಉಡುಪಿ: ನಗರಸಭೆಯ ಮೂಡು ಪೆರಂಪಳ್ಳಿ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಅನಿಟಾ ಬೆಲಿಂಡ ಡಿಸೋಜ ಜಯ ಸಾಧಿಸಿದ್ದಾರೆ.

ಕಾಂಗ್ರೆಸ್ ಸದಸ್ಯೆ ಸೆಲಿನಾ ಕರ್ಕಡಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರುತಿ ವಿರುದ್ಧ ಬಿಜೆಪಿ ಅಭ್ಯರ್ಥಿ ಅನಿತಾ ಬೆಲಿಂಡಾ ಡಿಸೋಜ 6 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ಚಲಾವಣೆಯಾದ ಒಟ್ಟು 2039 ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಅನಿತಾ 1015 ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರುತಿ 1009 ಮತಗಳನ್ನು ಪಡೆದಿದ್ದರು. 15 ನೋಟಾ ಮತಗಳು ಬಿದ್ದಿವೆ.

ಕಳೆದ 10 ವರ್ಷಗಳಿಂದ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಮೂಡು ಪೆರಂಪಲ್ಲಿ ವಾರ್ಡ್ ಇದೀಗ ಬಿಜೆಪಿ ಪಾಲಾಗಿದೆ.

35 ಸ್ಥಾನಗಳ ಉಡುಪಿ ನಗರಸಭೆಯಲ್ಲಿ ಈ ಸೋಲಿನಿಂದ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ ನಾಲ್ಕರಿಂದ ಮೂರಕ್ಕೆ ಇಳಿದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News