ವಿವಿಧ ಬೇಡಿಕೆ ಈಡೇರಿಕೆಗಾಗಿ ವಿಮಾ ಪಿಂಚಣಿದಾರರಿಂದ ಧರಣಿ
ಉಡುಪಿ: ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದ ಕರೆಯಂತೆ ವಿಮಾ ಪಿಂಚಣಿದಾರರ ಸಂಘ ಉಡುಪಿ ವಿಭಾಗದ ಸದಸ್ಯರಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಎಲ್‌ಐಸಿ ವಿಭಾಗೀಯ ಕಛೇರಿಯ ಆವರಣದಲ್ಲಿ ಧರಣಿ ನಡೆಸಲಾಯಿತು.
ಹೊರರೋಗಿಯಾಗಿ ಪಡೆದುಕೊಳ್ಳುವ ಚಿಕಿತ್ಸೆಗಳಿಗೆ ನಗದು ವೈದ್ಯಕೀಯ ಭತ್ಯೆ ಮತ್ತು ಆರೋಗ್ಯ ತಪಾಸಣೆಗೆ ತಗಲುವ ಖರ್ಚನ್ನು ಭರಿಸಬೇಕು. ೧೯೮೬ರ ಪೂರ್ವನಿವೃತ್ತರಿಗೆ ಪರಿಹಾರದಲ್ಲಿ ಗಣನೀಯ ಹೆಚ್ಚಳ ಮಾಡಬೇಕು. ಆಗಸ್ಟ್ ೧೯೮೬ರ ಪೂರ್ವ ಪಿಂಚಣಿದಾರರಿಗೆ ಏಕರೂಪದಡಿ ಎ. ನ್ಯೂಟ್ರಲೈಸೇಷನ್ ಮಾಡಬೇಕು.
ಮೆಡಿಕ್ಲೈಮ್ ಯೋಜನೆಯಲ್ಲಿ ಸುಧಾರಣೆಗಳು ಮಾಡಬೇಕು. ನಿವೃತ್ತ ಸೈನಿಕರ ಉದ್ಯೋಗಿಗಳು, ಎಂಜಿನಿಯರ್‌ಗಳು ಮುಂತಾದವರಿಗೆ ಪಿಂಚಣಿ ಯೋಜನೆ ೧೯೯೫ಗೆ ಸೇರಲು ಮತ್ತೊಂದು ಅವಕಾಶ ನೀಡಬೇಕು. ವಯಸ್ಸಿನ ಹೊರತಾಗಿಯೂ ಎಲ್ಲಾ ಪಿಂಚಣಿದಾರರಿಗೆ ಎಕ್ಸ್-ಗ್ರೆಷಿಯಾ ಯೋಜನೆಯನ್ನು ನಿಯಮಿತವಾಗಿ ಮಾಸಿಕವಾಗಿ ಪಾವತಿ ಮಾಡಬೇಕು. ಸಾಮಾನ್ಯ ಜೀವ ವಿಮಾ ಪಿಂಚಣಿದಾರರ ಕುಟುಂಬ ಪಿಂಚಣಿಯನ್ನು ಶೇ.೧೫ರಿಂದ ೩೦ಕ್ಕೆ ಏರಿಸಬೇಕು.
ಸಂಘದ ಅಧ್ಯಕ್ಷ ಎ.ಮಧ್ವರಾಜ ಬಲ್ಲಾಳ್ ಪ್ರಾಸ್ತಾಕವಿಕವಾಗಿ ಮಾತನಾಡಿ ದರು. ಪ್ರಧಾನ ಕಾರ್ಯದರ್ಶಿಯಾಗಿ ವಿಠಲ್ ಮೂರ್ತಿ ಆಚಾರ್ಯ ಬೇಡಿಕೆಗಳ ಪಟ್ಟಿಯನ್ನು ಮಂಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥ ಮತ್ತು ಉಪಾಧ್ಯಕ್ಷ ಡೆರಿಕ್ ಎ.ರೆಬೆಲ್ಲೋ ಮಾತನಾಡಿದರು.