ಉಡುಪಿ: ನ.18ರಂದು ವಿವಿದೆಡೆ ವಿದ್ಯುತ್ ವ್ಯತ್ಯಯ

Update: 2023-11-16 14:12 GMT

ಉಡುಪಿ, ನ.16: 110/33/11ಕೆವಿ ವಿದ್ಯುತ್ ಉಪಕೇಂದ್ರ ಹಿರಿಯಡ್ಕ ದಲ್ಲಿ 110ಕೆವಿ ಬಸ್ ಬಾರ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ತ್ರೈಮಾಸಿಕ ನಿರ್ವಹಣೆಯ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, 33 ಕೆವಿ ಹೆಬ್ರಿ ಫೀಡರ್‌ ನಲ್ಲಿ ವಿದ್ಯುತ್ ಅಡಚಣೆಯಾಗುವುದರಿಂದ 33/11ಕೆವಿ ಹೆಬ್ರಿ ಉಪಕೇಂದ್ರದಿಂದ ಸರಬರಾಜು ಆಗುವ ಬೇಳೆಂಜೆ, ಕಳ್ತೂರು, ಸಂತೆಕಟ್ಟೆ, ಕರ್ಜೆ, ಮುಂಡಾಡಿಜೆಡ್ಡು, ಕುರ್ಪಾಡಿ, ಚಾರ, ಶಿವಪುರ, ಕನ್ಯಾನ, ನಾಡ್ಪಾಲು, ಸೋಮೇಶ್ವರ, ಸೀತಾನದಿ, ಮಡಾಮಕ್ಕಿ, ಕಾಸನಮಕ್ಕಿ, ಮುದ್ರಾಡಿ, ವರಂಗ, ಮುನಿಯಾಲು, ಕಬ್ಬಿನಾಲೆ, ಕೆರೆಬೆಟ್ಟು, ಹೊಸುರು, ಬಚ್ಚಾಪ್ಪು, ಹೆಬ್ರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಅಲ್ಲದೇ 110/33/11ಕೆವಿ ವಿದ್ಯುತ್ ಉಪಕೇಂದ್ರ ಹಿರಿಯಡ್ಕದಲ್ಲಿ 110 ಕೆವಿ ಹೆಗ್ಗುಂಜೆ ಮಾರ್ಗದ ಲೈನ್ ಸಿ.ಟಿ.ಯ ತುರ್ತುನಿರ್ವಹಣೆ ಮತ್ತು 110ಕೆವಿ ಬಸ್ ಬಾರ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, 110/33/11 ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಪಡೆಯುವ 110 ಕೆವಿ ಮಧುವನ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಮಂದಾರ್ತಿ ಮತ್ತು ಬಾರ್ಕೂರು ಎಕ್ಸ್‌ಪ್ರೆಸ್ ಫೀಡರಿನಲ್ಲಿ ಹಾಗೂ 33ಕೆವಿ ಪರ್ಕಳ, 33 ಕೆವಿ ಮಾಹೆ ಮತ್ತು 11ಕೆವಿ ಹಿರಿಯಡಕ, ಬಜೆ, ಪೆರ್ಡೂರು, ಮಾಣೈ, ಹಿರೇಬೆಟ್ಟು ಫೀಡರ್ ಮಾರ್ಗದಲ್ಲಿ ಹೊಸಾಳ, ಕಚ್ಚೂರು, ಹೇರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಶಿರೂರು, ನಂಚಾರು, ಹಿಲಿಯಾಣ, ಮಂದಾರ್ತಿ, ಹೆಬ್ಬಾಡಿ, ಪರ್ಕಳ ಸಿಟಿ, ಮಾಹೆ, ಹಿರಿಯಡ್ಕ ಪೇಟೆ, ಬಜೆ, ಬಜೆ ವಾಟರ್ ಸಪ್ಲೈ, ಅಲಂಗಾರ್, ಜೋಗಿಬೆಟ್ಟು, ಹತ್ರ ಬೈಲು, ಪೆರ್ಡೂರು, ಮೇಲ್ಪೇಟೆ, ಕುಂತಳಕಟ್ಟೆ, ಎಳ್ಳಾರೆ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನವೆಂಬರ್ 18ರಂದು ಬೆಳಗ್ಗೆ 9 ರಿಂದ ಸಂಜೆ 5:00ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News