ಉಡುಪಿ: ನ.18ಕ್ಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

Update: 2023-11-11 16:06 GMT

ಉಡುಪಿ, ನ.11: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಾಹೆ ವಿವಿ, ಎಂಜಿಎಂ ಕಾಲೇಜುಗಳ ಆಶ್ರಯದಲ್ಲಿ ಬಾರಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರಶಾಸ್ತ್ರಿ ಸ್ಮರಣಾರ್ಥ ಉಡುಪಿ ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ನ.18ರ ಶನಿವಾರ ಬೆಳಿಗ್ಗೆ 9  ರಿಂದ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಶಾಲಾ-ಕಾಲೇಜು ಗುರುತುಚೀಟಿಯೊಂದಿಗೆ ಬೆಳಿಗ್ಗೆ 9  ಗಂಟೆಗೆ ಹೆಸರು ನೋಂದಾಯಿಸಿ ಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರವೇಶ ಶುಲ್ಕವಿಲ್ಲ.

ಸ್ಪರ್ಧಾ ವಿಷಯ: 1ರಿಂದ 4ನೇ ತರಗತಿ ವಿಭಾಗ ಹಾಗೂ 5ರಿಂದ 7ನೇ ತರಗತಿ ವಿಭಾಗದ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯ. 8ರಿಂದ 10ನೇ ತರಗತಿ ವಿಭಾಗಕ್ಕೆ ಗೂಡುದೀಪ ಅಥವಾ ರಾಷ್ಟ್ರೀಯ ಹಬ್ಬ, ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಅಥವಾ ಪರಿಸರ ಸಂರಕ್ಷಣೆ ಹಾಗೂ ಪದವಿ ವಿದ್ಯಾರ್ಥಿಗಳು ಉಡುಪಿ ಪರ್ಯಾಯೋತ್ಸವ ಅಥವಾ ವಿಶ್ವಶಾಂತಿ ವಿಷಯದ ಮೇಲೆ ಚಿತ್ರ ಬರೆಯಬೇಕು.

ಸ್ಪರ್ಧಾ ಸಮಯ ನ.18ರ ಬೆಳಗ್ಗೆ 9:00ರಿಂದ 11:00ರವರೆಗೆ, ಚಿತ್ರ ಬಿಡಿಸಲು ಹಾಳೆಯನ್ನು ಸಂಘಟಕರೆ ಒದಗಿಸು ತ್ತಾರೆ. ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. ಪ್ರತೀ ವಿಭಾಗಗಳಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಬಹುಮಾನ ನಗದು ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ. ಸ್ಪರ್ಧೆಯ ಫಲಿತಾಂಶವನ್ನು ಸ್ಥಳದಲ್ಲೆ ತಿಳಿಸಿ ಬಹುಮಾನ ವಿತರಿಸಲಾಗುತ್ತದೆ. ಪ್ರತಿ ವಿಭಾಗದಲ್ಲಿ ಕನಿಷ್ಠ 5 ಜನ ವಿದ್ಯಾರ್ಥಿಗಳಿದ್ದರೆ ಮಾತ್ರ ಸ್ಪರ್ಧೆ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ: 9448868868ನ್ನು ಸಂಪರ್ಕಿಸುವಂತೆ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಗಳ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News