ಉಡುಪಿ: ಕೊಲೆ ಪ್ರಕರಣದ ಸಂತ್ರಸ್ತರ ಮನೆಗೆ "ದಿ ಮುಸ್ಲಿಂ ಸೆಂಟ್ರಲ್ ಕಮಿಟಿ" ನಿಯೋಗ ಭೇಟಿ

Update: 2023-11-18 12:37 GMT

ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಅಲ್ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ರವರ ನಿರ್ದೇಶನದಂತೆ ನೇಜಾರಿನಲ್ಲಿ ದುಷ್ಕರ್ಮಿಯಿಂದ ಕೊಲೆಗೀಡಾದ ಸಂತ್ರಸ್ತರ ಮನೆಗೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸದಸ್ಯರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಶೀಘ್ರವಾಗಿ ಅಪರಾಧಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಪ್ರಯತ್ನವನ್ನು ಪ್ರಶಂಸಿ, ಕೃತಜ್ಞತೆಯನ್ನು ಸಲ್ಲಿಸಿದರು.

ತ್ವರಿತ ಗತಿಯಲ್ಲಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ  ವಿಷೇಶ ತ್ವರಿತ ನ್ಯಾಯಾಲಯ ಮೂಲಕ ಪ್ರಕರಣವನ್ನು ವಿಚಾರಣೆ ನಡೆಸಿ ಅಪರಾಧಿಗೆ ತಕ್ಕ ಶಿಕ್ಷೆ ಆಗುವಂತೆ ಪ್ರಯತ್ನಿಸಬೇಕೆಂದು ಸರಕಾರವನ್ನು ಒತ್ತಾಯಿಸಲು ಈ ವೇಳೆ ನಿರ್ಣಯಿಸಲಾಯಿತು.

ನಿಯೋಗದಲ್ಲಿ ಉಪಾಧ್ಯಕ್ಷರಾದ ಹಾಜಿ ಸಿ ಮಹಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಕೆ ಅಶ್ರಫ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಸಿ.ಎಂ. ಹನೀಫ್, ಯಹ್ಯಾ ನಖ್ವಿ , ಹಾಜಿ ರಿಯಾಝುದ್ದೀನ್, ಹಾಜಿ ಮೊಯಿದಿನ್ ಮೋಣು, ಎನ್.ಕೆ. ಅಬೂಬಕ್ಕರ್, ಖಲೀಲ್ ಅಹ್ಮದ್ ಉಡುಪಿ, ಹಾಜಿ ಮಕ್ಬೂಲ್ ಅಹ್ಮದ್, ಅದ್ದು ಹಾಜಿ, ಬಿ.ಎಸ್. ಇಂತಿಯಾಝ್, ಶಂಸುದ್ದೀನ್ ಕಂಡತ್ ಪಳ್ಳಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ.ಎ. ಗಫೂರ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News