ಶಿರಾಲಿ ಆಟೋ ಚಾಲಕರಿಂದ ಮಾನವೀಯತೆ: ಹೋಳಿ ಹಬ್ಬದಲ್ಲಿ ಸಂಗ್ರಹಿಸಿದ ಹಣ ಕ್ಯಾನ್ಸರ್ ಪೀಡಿತ ಪುಟಾಣಿಗೆ ದೇಣಿಗೆ

ಭಟ್ಕಳ: ಶಿರಾಲಿಯ ಆಟೋ ಚಾಲಕರು ಮಾನವೀಯತೆ ಮೆರೆದು, ಹೋಳಿ ಹಬ್ಬದ ಸಂದರ್ಭದಲ್ಲಿ ಸಂಗ್ರಹಿಸಿದ ಹಣವನ್ನು ಕ್ಯಾನ್ಸರ್ ಪೀಡಿತ ಆರು ವರ್ಷದ ಪುಟಾಣಿ ಯಶ್ಚಿತಾ ಲಕ್ಷ್ಮಣ ದೇವಾಡಿಗ ಚಿಕಿತ್ಸೆಗೆ ದೇಣಿಯಾಗಿ ನೀಡಿದ್ದಾರೆ.
ತಟ್ಟಿಹಕ್ಕಲ್ ನಿವಾಸಿಯಾದ ಈ ಪುಟಾಣಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಕುಟುಂಬ ತೀರಾ ಬಡವಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ದಾನಿಗಳು ಸಹಾಯ ಹಸ್ತ ಚಾಚಿದ್ದು, ಶಿರಾಲಿಯ ಆಟೋ ಚಾಲಕರು ಕೂಡಾ ತಮ್ಮ ಹೋಳಿ ಹಬ್ಬದ ಸಂಗ್ರಹದಿಂದ ರೂ.25,260 ಮನೆಗೆ ತೆರಳಿ ಹಸ್ತಾಂತರಿಸಿದ್ದಾರೆ.
ಈ ಸಂದರ್ಭ ದಾಸ ನಾಯ್ಕ, ಪರಶುರಾಮ್ ನಾಯ್ಕ, ಶಿವಾನಂದ ನಾಯ್ಕ, ಕೇಶವ್ ನಾಯ್ಕ, ಪರಮೇಶ್ವರ್ ದೇವಾಡಿಗ, ತಿಮಪ್ಪ ನಾಯ್ಕ, ಕುಪ್ಪ ನಾಯ್ಕ, ನಾಗರಾಜ್ ದೇವಾಡಿಗ, ಮಾದೇವ ನಾಯ್ಕ, ಪಾಂಡು ದೇವಾಡಿಗ, ವಸಂತ್ ದೇವಾಡಿಗ, ಸುರೇಂದ್ರ, ಗಣಪತಿ ನಾಯ್ಕ, ಅಣ್ಣಪ ನಾಯ್ಕ, ಈಶ್ವರ್ ನಾಯ್ಕ, ರಾಮಚಂದ್ರ ನಾಯ್ಕ, ಯೋಗೇಶ್ ನಾಯ್ಕ ಹಾಗೂ ಆಟೋ ಚಾಲಕರ ಮಾಲಕರು ಉಪಸ್ಥಿತರಿದ್ದರು.
ಈ ಪುಟಾಣಿ ಚಿಕಿತ್ಸೆಗೆ ಇನ್ನಷ್ಟು ಆರ್ಥಿಕ ನೆರವು ನೀಡಲು ಇಚ್ಛಿಸುವವರು A/C NUMBER: 36913320337, IFSC CODE: SBIN0000269 ಗೆ ಹಣ ವರ್ಗಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.