ಭಟ್ಕಳ: ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ವತಿಯಿಂದ ಅನ್ನದಾನ, ರಕ್ತದಾನ ಶಿಬಿರ

ಭಟ್ಕಳ: ದಿ. ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಟ್ಕಳ ಟ್ಯಾಕ್ಸಿ ನಿಲ್ದಾಣದಲ್ಲಿ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ ಭಟ್ಕಳ ವತಿಯಿಂದ ಉಚಿತ ಅನ್ನದಾನ ಹಾಗೂ ರಕ್ತ ದಾನ ಶಿಬಿರವನ್ನು ಸೋಮವಾರ ನಡೆಸಿದರು.
ಬೆಳ್ಳಿಗ್ಗೆಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 80ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಬಳಿಕ ಮಧ್ಯಾಹ್ನ ವೇಳೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿ ದಿ. ಪುನೀತ್ ರಾಜಕುಮಾರ ಫೋಟೋ ಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಭಟ್ಕಳದ ನೂರಾರು ಸಾರ್ವಜನಿಕರಿಗೆ ಅನ್ನದಾನ ನೆರವೇರಿಸಿದರು.
ಬಳಿಕ ಅಪ್ಪು ಅಭಿಮಾನಿ ತಿಮ್ಮಯ್ಯ ನಾಯ್ಕ ಮಾತನಾಡಿ ಅಪ್ಪು ಜೀವಂತವಿದ್ದಾಗ ಎಷ್ಟೋ ಅನಾಥ ಹಾಗೂ ನಿರ್ಗತಿಕರಿಗೆ ಅಸರೆಯಾಗಿದ್ದರು ಅವರ ಆದರ್ಶದಂತೆ ಅವರ ಹುಟ್ಟುಹಬ್ಬದ ದಿನವಾದ ಇಂದು ನಮ್ಮ ಅಭಿಮಾನಿ ಬಳಗದಿಂದ ಭಟ್ಕಳದ ಜನತೆಗೆ ಒಂದು ಹೊತ್ತಿನ ಊಟ ನೀಡಿ ಅವರ ಹಸಿವು ನೀಗಿ ಸುವ ಕೆಲಸ ಮಾಡಿದ್ದೇವೆ ಎಂದ ಅವರು ಸುಮಾರು ಒಂದು ಸಾವಿರ ಜನರಿಗೆ ಅನ್ನದಾನ ಸೇವೆ ನಡೆಸಿದ್ದೇವೆ ಎಂದ ಅವರು ಇದನ್ನು ನೋಡಿ ಮುಂದಿನ ಪೀಳಿಗೆ ಕೂಡ ಮುಂದುವರೆಸಿಕೊಂಡು ಹೋಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿದರು.
ನಂತರ ಜೈ ಮಾರುತಿ ರಕ್ತ ದಾನ ಬಳಗದ ಪ್ರಮುಖರಾದ ಗಣೇಶ ಮಾತನಾಡಿದರು. ಈ ವೇಳೆ ಅಪ್ಪು ಅಭಿಮಾನಿಗಳು ಹಾಗೂ ಜೈ ಮಾರುತಿ ರಕ್ತದಾನ ಬಳಗದವರು ಉಪಸ್ಥಿತರಿದ್ದರು.

