ಗುಜರಾತ್ ನಲ್ಲಿ ರಸ್ತೆ ಅಪಘಾತ: ಕುಂಬ ಮೇಳಕ್ಕೆ ತೆರಳುತ್ತಿದ್ದ ವಿಜಯಪುರದ ಇಬ್ಬರು ಮೃತ್ಯು, ನಾಲ್ವರು ಗಂಭೀರ
Update: 2025-02-25 12:38 IST

ವಿಜಯಪುರ: ಗುಜರಾತ್ ರಾಜ್ಯದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ತೆರಳುತ್ತಿದ್ದ ವಿಜಯಪುರ ಜಿಲ್ಲೆಯ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ.
ಮೃತರನ್ನು ಚಡಚಣ ಪಟ್ಟಣದ ವಿಶ್ವನಾಥ ಅವಜಿ (55) ಮತ್ತು ಮಲ್ಲಿಕಾರ್ಜುನ ಸದ್ದಲಗಿ (40) ಎಂದು ಗುರುತಿಸಲಾಗಿದೆ.
ಇವರು ಸಂಚರಿಸುತ್ತಿದ್ದ ಟೆಂಪೊ ಟ್ರಾವಲರ್ ಗುಜರಾತ್ ನ ಪೋರ್ ಬಂದರ್ ಸಮೀಪ ನಿಂತಿದ್ದ ಟಿಪ್ಪರ್ ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಚಾಲಕ ಸಮೇತ ಒಟ್ಟು 12 ಮಂದಿ ಟಿಟಿಯಲ್ಲಿ ಚಡಚಣ ದಿಂದ ಪ್ರಯಾಗರಾಜ್ ಗೆ ಹೊರಟಿದ್ದರು. ಘಟನೆಯಲ್ಲಿ ನಾಲ್ವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಗುಜರಾತ್ ನ ಪೋರಬಂದರ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.