ಸುರಪುರ | ಸೂಗುರೇಶ್ವರ ಜಾತ್ರೆ ಪ್ರಯುಕ್ತ ́ಸಂಗೀತ ದರ್ಬಾರ್ʼ ಕಾರ್ಯಕ್ರಮ

ಯಾದಗಿರಿ : ಸುರಪುರ ನಗರದ ಶೆಟ್ಟಿ ಓಣಿಯ ಸೂಗುರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ́ಸಂಗೀತ ದರ್ಬಾರ್ʼ ಕಾರ್ಯಕ್ರಮ ಜರುಗಿತು ವಿವಿಧ ಕಡೆಗಳಿಂದ ಆಗಮಿಸಿದ್ದ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಖ್ಯಾತ ಸಂಗೀತ ಕಲಾವಿದ ಬಸವರಾಜ ಭಂಟನೂರ ಅವರು ಮಾತನಾಡಿ, ಸಂಗೀತ ಎನ್ನುವುದು ಗಂಧರ್ವ ವಿದ್ಯೆ ನಮ್ಮ ಮನೆ ಹಾಗೂ ಮನಗಳಲ್ಲಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸನ್ನೀಹಿತವಾಗಿರುತ್ತದೆ ಸಂಗೀತಾಸಕ್ತರು ಅದನ್ನು ಗುರುತಿಸಿ ಆರಾಧಿಸುತ್ತಾರೆ, ಸಂಗೀತ ಆಲಿಸುವುದರಿಂದ ಮನಸ್ಸಿಗೆ ಶಾಂತಿ ನೀಡುತ್ತದೆ ಎಂದು ಹೇಳಿದರು.
ದೇವಸ್ಥಾನದ ಸಂಸ್ಥಾಪಕರ ವಂಶಸ್ಥರಾದ ಸುನೀಲ್ ಸರಪಟ್ಟಣಶೆಟ್ಟಿ, ಎಸ್.ಎಸ್.ಹಿರೇಮಠ, ಗುರುಪಾದಯ್ಯ ಹಿರೇಮಠ, ದೀಪಕಸಿಂಗ್ ಹಜೇರಿ ಹಾಗೂ ಸಾನಿಧ್ಯ ವಹಿಸಿದ್ದ ದೇವಸ್ಥಾನದ ಅರ್ಚಕ ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಗೀತ ಕಲಾವಿದ ಆಮಯ್ಯಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಸಂಗೀತ ಕಲಾವಿದರಾದ ಚಂದ್ರಶೇಖರ ಗೋಗಿ ಹಾಗೂ ಅವರಿಂದ ಸ್ಯಾಕ್ಸೋಫೋನ್ ಹಾಗೂ ಎಸ್.ಎಸ್.ಹಿರೇಮಠ ಅವರ ತಬಲಾ ಜುಗಲ್ ಬಂದಿ ಸಭಿಕರ ಮನಸೂರೆಗೊಳಿಸಿತು.
ಸಂಗೀತ ಕಲಾವಿದರಾದ ಮೋಹನರಾವ ಮಾಳದಕರ, ಸಿದ್ದಯ್ಯಸ್ವಾಮಿ ಬಳ್ಳುಂಡಗಿಮಠ, ಕವಿತಾ ಪತ್ತಾರ, ರಾಜಶೇಖರ ಗೆಜ್ಜಿ, ಶರಣಪ್ಪ ಕಮ್ಮಾರ, ವಿರೇಶ ಬಡಿಗೇರ, ಸಿದ್ದಯ್ಯಸ್ವಾಮಿ ಪಡದಳ್ಳಿ, ಈಶ್ವರ ಬಡಿಗೇರ, ಉಮೇಶ ಯಾದವ್, ಸುರೇಶ ಅಂಬೂರೆ, ರಮೇಶ ಕುಲಕರ್ಣಿ, ನರಸಿಂಹ ಭಂಡಿ, ಗುರುನಾಥರೆಡ್ಡಿ ಶೀಲವಂತ, ಪ್ರಿಯಾಂಕಾ ಪತ್ತಾರ, ಸೂಗಮ್ಮ ಕೊಂಗಂಡಿ, ಪ್ರಾಣೇಶ ಕುಲಕರ್ಣಿ, ಮಹಾಂತೇಶ ಶಹಾಪುರಕರ, ಮನೋಜ ವಿಶ್ವಕರ್ಮ, ಶರಣಬಸವ ಕೊಂಗಂಡಿ ಮುಂತಾದವರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು. ಬೆಳಗಿನ ಜಾವ ಆರು ಗಂಟೆಗೆ ಕಳಸಾರೋಹಣ ಕಾರ್ಯಕ್ರಮ ಜರುಗಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಿದ್ದಯ್ಯಸ್ವಾಮಿ ಬಳ್ಳುಂಡಗಿಮಠ ಪ್ರಾರ್ಥಿಸಿದರು, ಎಚ್.ವೈ.ರಾಠೋಡ ನಿರೂಪಿಸಿದರು, ಅಜಾದ್ ಚಂದ್ರಶೇಖರ ಸ್ವಾಗತಿಸಿದರು ಹಾಗೂ ರಮೇಶ ಕುಲಕರ್ಣಿ ವಂದಿಸಿದರು. ಪೃಥ್ವಿರಾಜ ಸರಪಟ್ಟಣಶೆಟ್ಟರು, ಚಂದ್ರಕಾಂತ ಬಳ್ಳುಂಡಗಿಮಠ, ವಿರೇಶ ಪಂಚಾಂಗಮಠ, ಸೂಗುರೇಶ ಮಡ್ಡಿ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪನವರ ಮಠ, ಸಿದ್ದಣ್ಣ ದಿಗ್ಗಾವಿ, ಮುರುಳಿಧರ ಅಂಬೂರೆ,ರಮೇಶ ಗುಡಗುಂಟಿ, ಸುನೀಲ್ ಗುಗ್ಗರಿ, ಆನಂದ ಗಡಗಡೆ, ಪವನ ರಾಠಿ, ದಿನೇಶ ವಿಶ್ವಕರ್ಮ, ವಿರೇಶ ಮಾಟನೂರು, ಶಂಕ್ರಪ್ಪ ಹೂಗಾರ ಇತರರು ಉಪಸ್ಥಿತರಿದ್ದರು.