ನಾಡೋಜ ಗೋ.ರು ನಮ್ಮ ನಾಡಿನಲ್ಲಿದ್ದಾರೆ ಎಂಬುದೇ ನಮಗೆ ಹೆಮ್ಮೆಯ ಸಂಗತಿ : ಮುರಘರಾಜೇಂದ್ರ ಸ್ವಾಮೀಜಿ

Update: 2024-12-01 14:18 GMT

ಯಾದಗಿರಿ : ಪಾಂಡಿತ್ಯ ಮತ್ತು ವೈಚಾರಿಕ ಚಿಂತನೆ ಮೈಗೂಡಿಸಿಕೊಂಡ ನಾಡೋಜ ಗೋರುಚ ಅವರು ನಮ್ಮ ನಾಡಿನಲ್ಲಿದ್ದಾರೆ ಎಂಬುದೇ ನಮಗೆ ಹೆಮ್ಮೆಯ ಸಂಗತಿ ಎಂದು ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಗುರು ಮುರಘ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ರವಿವಾರ ನಗರದ ಕಸಾಪ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಜಂಟಿ ಸಹಯೋಗದಲ್ಲಿ ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಾಡೋಜ ಡಾ.ಗೋ.ರು.ಚನ್ನಬಸಪ್ಪ ಅವರಿಗೆ ಆಯೊಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಗರ ನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ರಾಜ್ಯ ಸರಕಾರ ಆರಂಭಿಸುತ್ತಿರುವ ಜಾನಪದ ವಿವಿಯ ಹಿಂದಿನ ಬಹುದೊಡ್ಡ ಕೊಡುಗೆ ಗೋ.ರು.ಚನ್ನಬಸಪ್ಪ ಅವರದ್ದು. ಶರಣ ಸಾಹಿತ್ಯ, ಕನ್ನಡ ಸಾಹಿತ್ಯ ಮತ್ತು ನಾಡಿನ ಜಾನಪದ ಕ್ಷೇತ್ರಕ್ಕೆ ಗೋರುಚ ಅವರ ಶ್ರಮ ಅಪಾರವಾಗಿದೆ ಎಂದರು.

ಉಪನ್ಯಾಸಕ ಡಾ.ಎಸ್.ಎಸ್.ನಾಯಕ ಮಾತನಾಡಿ, ಗೋರುಚ ಅವರು ನಾಡಿನ ಸಾಂಸ್ಕೃತಿಕ ವಲಯಕ್ಕೆ ಅನನ್ಯ ಕೊಡುಗೆ ನೀಡಿದವರು. ಆರಂಭದಲ್ಲಿ ಆಂಗ್ಲ ಶಿಕ್ಷಕರಾಗಿ ನಂತರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಜತೆಗೆ ಕನ್ನಡ ಸಾಹಿತ್ಯ ಮತ್ತು ಶರಣ ಸಾಹಿತ್ಯ ಪರಿಷತ್ತನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ ಅವರು ನಮ್ಮೆಲ್ಲರಿಗೆ ಆದರ್ಶರಾಗಿದ್ದಾರೆ ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗೊ.ರು.ಚನ್ನವಸ್ಸಪ್ಪನವರು, ಯಾದಗಿರಿ ಜಿಲ್ಲೆಯ ಜನರ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಮರಣವೇ ಮಹಾನವಮಿ ಎಂಬ ಶರಣರ ವಾಣಿಯೇ ನನಗೆ ಆದರ್ಶ. ರಾಜಕೀಯ ವ್ಯವಸ್ಥೆ ಇಂದು ಜನಸಮುದಾಯಕ್ಕೆ ಸವಾಲಾಗಿ ಮಾರ್ಪಟ್ಟಿವೆ. ಈ ಬಗ್ಗೆ ಪ್ರಜ್ಞಾವಂತ ಸಮುದಾಯ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ, ಸಾಹಿತಿ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಕದಳಿ ವೇದಿಕೆ ಜಿಲ್ಲಾ ಅಧ್ಯಕ್ಷೆ ಭಾಗ್ಯವತಿ ಕೆಂಭಾವಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ, ಡಾ.ಸಿದ್ದರಾಜ ರೆಡ್ಡಿ, ಅಯ್ಯಣ್ಣಾ ಹುಂಡೇಕಾರ, ಸಿ ಎಮ್ ಪಟ್ಟೇದಾರ, ಆರ್ ಮಾಹಾದೇವಪ್ಪ ಗೌಡ ಅಬ್ಬೆತುಮಕೂರ, ಯಾದಗಿರಿ ಕಸಾಪ ಅಧ್ಯಕ್ಷ ವೆಂಕಟೇಶ ಕಲಕಂಭ, ಹುಣಸಗಿ ತಾಲೂಕು ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಶಹಪೂರ ತಾಲ್ಲೂಕು ಕಸಾಪ ಅಧ್ಯಕ್ಷ ರವಿಂದ್ರ ಹೊಸಮನಿ, ಸುರಪುರ ತಾಲೂಕು ಕಸಾಪ ಅದ್ಯಕ್ಷ ಶರಬಸವ ಯಳವಾರ, ಗುರಮಿಠಕಲ್ ಕಸಾಪ ಅಧ್ಯಕ್ಷ ಬಸರೆಡ್ಡಿ, ಹುಣಸಗಿ ಶಸಾಪ ಅಧ್ಯಕ್ಷ ಶೀವು ಬಂಡೋಳಿ, ಶಹಪೂರ ಶಸಾಪ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ, ಯಾದಗಿರಿ ಶಸಾಪ ಅಧ್ಯಕ್ಷ ಗುರಪ್ಪಚಾರ್ಯ ಬಾಡಿಯಾಲ, ಸ್ವಾಮಿದೇವ ದಾಸನಕೇರಿ, ಬಸವಂತ್ರಾಯ ಮಾಲಿ ಪಾಟೀಲ, ಕಸಾಪ ಮತ್ತು ಶಸಾಪ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News