ಯಾದಗಿರಿ | ಲೋಕ್ ಅದಾಲತ್‌ನಲ್ಲಿ 15,532 ಪ್ರಕರಣಗಳು ಇತ್ಯರ್ಥ : ನ್ಯಾ.ಬಿ.ಎಸ್.ರೇಖಾ
ಯಾದಗಿರಿ : ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 4,626 ಹಾಗೂ ವ್ಯಾಜ್ಯಪೂರ್ವ 10,906 (ಕಂದಾಯ, ಮೋಟರ್ ವಾಹನ ಕಾಯ್ದೆ ಉಲ್ಲಂಘನೆ) ಪ್ರಕರಣಗಳನ್ನು (ಪಿ.ಎಲ್.ಸಿ) ಸೇರಿ ಒಟ್ಟು 15,532 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ ಅವರು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಡಿ.14 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 10 ಪೀಠಗಳ ರಚನೆ ಮಾಡಲಾಗಿತ್ತು. ಯಾದಗಿರಿಯ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ 62, ಯಾದಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 508, ಯಾದಗಿರಿಯ ಜೆ.ಎಂ.ಎಫ್.ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 284, ಯಾದಗಿರಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 595, ಶಹಾಪೂರ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 364, ಶಹಾಪೂರ ಜೆಎಂಎಫ್ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 755, ಶಹಾಪೂರ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 913, ಶೋರಾಪೂರ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 321, ಶೋರಾಪೂರ ಜೆಎಂಎಫ್ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 357, ಶೋರಾಪೂರ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ 467 ಪ್ರಕರಣಗಳು ಇತ್ಯರ್ಥಗೊಳಿಸಲಾಯಿತು ಎಂದರು.
ಜಿಲ್ಲಾದ್ಯಂತ ಒಟ್ಟಾರೆ 1 ಹಣ ವಸೂಲಿ ದಾವೆ, 42 ವಿಭಾಗ ಕೋರಿದ ದಾವೆಗಳು, 10 ನಿರ್ದಿಷ್ಟ ಹಕ್ಕುಗಳ ಪರಿಹಾರ ದಾವೆಗಳು, 6 ಅಂತಿಮ ಡಿಕ್ರಿ ಪ್ರಕರಣಗಳು, 20 ಚೆಕ್ ಅಮಾನ್ಯ ಪ್ರಕರಣಗಳು, 13 ಎಫ್.ಡಿ.ಪಿ, 15 ಮೋಟಾರು ವಾಹನ ಅಪಘಾತ, 15 ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿ (ಮೆಂಟನೆನ್ಸ್),1 ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಯಡಿ (D.V),1995 ಜನನಕ್ಕೆ ಸಂಬಂಧಿಸಿದ ಪ್ರಕರಣಗಳ ಅರ್ಜಿ ಮತ್ತು 19 ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, 2329 ಲಘು ಪ್ರಕರಣಗಳು, ಹಾಗೂ 80 ಇತರೆ ಅಪರಾಧಿಕ ಪ್ರಕರಣಗಳು ಜಿಲ್ಲಾದ್ಯಂತ ಇತ್ಯರ್ಥಗೊಂಡವು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.