ಯಾದಗಿರಿ | ಸಾಹಿತ್ಯವು ಜ್ಯೋತಿ ಇದ್ದಂತೆ ಉರಿದಷ್ಟು ಬೆಳಕು ಬೀರುತ್ತದೆ : ಡಾ.ಸಿದ್ಧತೋಟೆಂದ್ರ ಶ್ರೀ
ಯಾದಗಿರಿ : ಸಾಹಿತ್ಯ ಎಂದರೆ ಶ್ರೀಗಂಧವಿದ್ದಂತೆ ತೀಡಿದಷ್ಟು ಕಂಪು ಹರಡುತ್ತದೆ, ಸಾಹಿತ್ಯ ಎಂದರೆ ಜ್ಯೋತಿ ಇದ್ದಂತೆ ಉರಿದಷ್ಟು ಬೆಳಕು ಬೀರುತ್ತದೆ, ಅದರಂತೆ ಪ್ರಕಾಶ ಅಂಗಡಿ ನೇತೃತ್ವದ ಸಗರನಾಡು ಸೇವಾ ಪ್ರತಿಷ್ಠಾನವು ಶ್ರೀಗಂಧ, ಜ್ಯೋತಿ ಇದ್ದಂತೆ ಎಂದು ನಾಲವಾರದ ಶ್ರೀಕೋರಿ ಸಿದ್ದೇಶ್ವರ ಸಂಸ್ಥಾನ ಮಠದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಸುರಪುರ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನದ ದಶಮಾನೋತ್ಸವ, ಸಗರನಾಡು ಸಾಂಸ್ಕೃತಿಕ ಉತ್ಸವ, ಪುಸ್ತಕಗಳ ಬಿಡುಗಡೆ, ಹತ್ತು ಶಾಲೆಗಳಿಗೆ ಪುಸ್ತಕಗಳ ದೇಣಿಗೆ, ಸಾಧಕರಿಗೆ ಸಗರನಾಡು ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಗರನಾಡು ಸೇವಾ ಪ್ರತಿಷ್ಠಾನದ ಕಾರ್ಯಗಳು ಇನ್ನೂ ದೇಶ, ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಬೆಳಗುವಂತಾಗಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಯಾದಗಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ್ ಮಾತನಾಡಿ, ಸಗರನಾಡು ಸೇವಾ ಪ್ರತಿಷ್ಠಾನ ನಾಡಿನಾದ್ಯಂತ ಕೆಲಸ ಮಾಡುತ್ತಿದೆ, ಅದು ಪ್ರಕಾಶ ಅಂಗಡಿ ಮತ್ತು ಪ್ರತಿಷ್ಠಾನಕ್ಕೆ ದೇವರು ಕೊಟ್ಟ ವರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ಶರಣ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಸಿ.ಸೋಮಶೇಖರ, ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ, ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಶೇಖರಗೌಡ ಮಾಲಿ ಪಾಟೀಲ್ ಕೊಪ್ಪಳ, ಡಾ.ಪ್ರದೀಪಕುಮಾರ ಮಂಡ್ಯ, ಡಾ.ಸುರೇಶ ಸಜ್ಜನ್, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ,ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ, ರಾಜಾ ಮುಕುಂದ ನಾಯಕ, ಜ್ಞಾನಚಂದ ಜೈನ್, ನಯೋಪ್ರಾ ಮಾಜಿ ಅಧ್ಯಕ್ಷ ಸೂಗುರೇಶ ವಾರದ, ಎಪಿಎಮ್ಸಿ ಮಾಜಿ ಸದಸ್ಯ ಮಲ್ಲಣ್ಣ ಸಾಹು ಮುಧೋಳ, ಟಿಎಪಿಸಿಎಮ್ಎಸ್ ಅಧ್ಯಕ್ಷ ಬಾಪುಗೌಡ ಪಾಟೀಲ್, ಶಿಕ್ಷಣ ಇಲಾಖೆ ಡಿಡಿ ಚನ್ನಬಸಪ್ಪ ಮುಧೋಳ, ಕಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಹಾಗೂ ಸ್ಮರಣ ಗ್ರಂಥ ಸಂಪಾಕ ಮಂಡಳಿಯ ಸಿದ್ಧರಾಮ ಹೊನ್ಕಲ್, ನಬಿಲಾಲ ಮಕಾನದಾರ, ಎಮ್.ಕೆ.ಶೇಖ್, ಎ.ಕಮಲಾಕರ ಸುರಪುರ, ಶರಣಗೌಡ ಪಾಟೀಲ್ ಜೈನಾಪುರ ವೇದಿಕೆಯಲ್ಲಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ರಾಜಶೇಖರ ಗೂಗಲ್, ಎಸ್.ಎಸ್.ಮಾರನಾಳ, ಮಲ್ಲಿಕಾರ್ಜುನರಡ್ಡಿ ಮಲ್ಲು ಬಾದ್ಯಾಪುರ, ಜಗದೀಶ ಪಾಟೀಲ್ ನಿರ್ವಹಿಸಿದರು. ಸೂಗುರೇಶ್ವರ ಸಂಗೀತ ಪಾಠಶಾಲೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜಾವಿದ್ ಹುಸೇನ್ ಹವಾಲ್ದಾರ ವಂದಿಸಿದರು.
ಸಗರನಾಡ ಸಿರಿ ಸ್ಮರಣ ಸಂಚಿಕೆ ಗ್ರಂಥ ಲೋಕಾರ್ಪಣೆ ಹಾಗೂ ವಿವಿಧ ಸಾಹಿತಿಗಳಾದ ಶರಣಗೌಡ ಪಾಟೀಲ್ ಜೈನಾಪುರರ ಮಕರದಂ, ಎಮ್.ಕೆ.ಶೇಖ್ ಅವರ ಸುರಪುರದ ದುಂದುಮೆಯ ದುಂದುಭಿ, ಪ್ರಕಾಶ ವಜ್ಜಲರ ಸ್ಪೂರ್ತಿಯ ಚಿಲುಮೆ, ಮಲ್ಲೇಶ ಕೋನಾಳರ ಕಲ್ಯಾಣದ ಕ್ರಾಂತಿ, ಡಾ.ಶೀಲಾದೇವಿ ಎಸ್.ಬಿರಾದಾರರ ಕಲ್ಯಾಣ ಕಾರುಣ್ಯ, ಶಿವು ಬಳಿಚಕ್ರರ ಮಾಸದ ಹೂ,ಶರಣಗೌಡ ಪಾಟೀಲ್ ಜೈನಾಪುರರ ಭಾವೈಕ್ಯತೆಯ ಬಿಂಬ, ಗುರುಪ್ರಸಾದ ವೈದ್ಯರ ಧರ್ಮ ಜ್ಞಾನ ಸಂಗಮ, ದುರ್ಗಪ್ಪ ಪೂಜಾರಿಯವರ 770 ಅಮರ ನುಡಿಮುತ್ತುಗಳು ಕೃತಿ ಲೋಕಾರ್ಪಣೆ ಮಾಡಲಾಯಿತು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾದೇವಪ್ಪ ಕಡೆಚೂರ ರಂಗಂಪೇಟ, ಸಂಗಪ್ಪ ಮಂಟೆ ಕೊಡೇಕಲ್, ಹಿರಿಯ ಸಂಶೋಧಕರಾದ ಹನುಮಾಕ್ಷಿ ಗೋಗಿ, ಡಿ.ಎನ್.ಅಕ್ಕಿ, ಇತಿಹಾಸ ತಜ್ಞ ಬಿ.ಪಿಹೂಗಾರ, ಹಿರಿಯ ಸಾಹಿತಿ ವಿರೇಶ ಹಿರೇಮಠ ಹಳ್ಳೂರ, ಪತ್ರಕರ್ತ ಸಿದ್ದಯ್ಯ ಪಾಟೀಲ್, ಪ್ರಗತಿಪರ ರೈತ ಶಿವಾನಂದ ಕೆಂಭಾವಿ, ಚಿತ್ರಕಲಾವಿದ ಸಂಗಣ್ಣ ದೋರನಹಳ್ಳಿಗೆ ಸಗರನಾಡು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ಅಕಾಡೆಮಿ, ಪ್ರಾಧಿಕಾರಕ್ಕೆ ನೇಮಕಗೊಂಡ ಯಾದಗಿರಿ ಜಿಲ್ಲೆಯ ಸದಸ್ಯರು, ಕರ್ನಾಟಕ ರಾಜ್ಯೋತ್ಸವ, ಸುವರ್ಣ ಮಹೋತ್ಸವ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸಿದ್ದರಾಮ ಹೊನ್ಕಲ್, ಶಿವಮೂರ್ತಿ ತನಿಖೆದಾರ ಡಾ.ಬಸವರಾಜ ಕಲೆಗಾರ, ಹಣಮಂತ ಬಾಡದ, ಕೆಂಚಪ್ಪ ನಗನೂರ, ಸರಸ್ವತಿ ಜುಲೈಕ ಬೇಗಂ,ಮ ಆಮಯ್ಯ ಲಿಂಗಯ್ಯ ಮಠ, ಅಮರಯ್ಯಸ್ವಾಮಿ ಹಿರೇಮಠ ಜಾಲಿಬೆಂಚಿ ಇವರಿಗೆ ಅಭಿನಂದಿಸಿ ಗೌರವಿಸಲಾಯಿತು.
ದತ್ತಿ ದಾನಿಗಳಾದ ಸುಗ್ಲಾದೇವಿ ಭೀಮಣ್ಣ ಅಂಗಡಿ ಸ್ಮರಣಾರ್ಥ ವಿಜಯಲಕ್ಷ್ಮೀ ಶರಣಬಸವ ಅಂಗಡಿ, ಕಲ್ಯಾಣಪ್ಪ ಮಲಗುಂಡ ಸ್ಮರಣಾರ್ಥ ಭಾಗೀರಥಿ ಸಂಗಣ್ಣ ದೋರನಹಳ್ಳಿ, ಸೊಲಬಣ್ಣ ಸಾಹುಕಾರ ಮುಧೋಳ ಸ್ಮರಣಾರ್ಥ ಚೆನ್ನಬಸಪ್ಪ ಮುಧೋಳ ನರಸಿಂಗಪೇಟ, ಸೋಮಪ್ಪ ಎಸ್.ಹೆಡಗಿನಾಳ ಸ್ಮರಣಾರ್ಥ ಶಿವಶರಣಪ್ಪ ಹೆಡಗಿನಾಳ ರಂಗಂಪೇಟ, ಹುತಾತ್ಮ ದಿ.ಪಾರಪ್ಪ ಗುತ್ತೇದಾರ ಸ್ಮರಣಾರ್ಥ ಪಾರಪ್ಪ ಲಕ್ಷ್ಮಣ ಗುತ್ತೇದಾರ, ನಾಗಮ್ಮ ವಿ.ಸಜ್ಜನ್ ಸ್ಮರಣಾರ್ಥ ಬಸವರಾಜ ಸಜ್ಜನ್ ರಂಗಂಪೇಟ, ಸಂಗಣ್ಣ ಹೋತಪೇಟ ಸ್ಮರಣಾರ್ಥ ಶಕುಂತಲಾ ಸಂಗಣ್ಣ ಹೋತಪೇಟ, ಬಸಪ್ಪ ಯ.ವಾಲಿಕಾರ ಬನ್ನಿಹಟ್ಟಿ ಸ್ಮರಣಾರ್ಥ ಮಹೇಶ ವಾಲಿಕಾರ ಇಲಕಲ್ಲ, ಶರಣಪ್ಪ ಸಾಹು ಗಾಣಿಗೇರ ಮಂದೆವಾಲ ಸ್ಮರಣಾರ್ಥ ಕಾಶಿನಾಥ ಬಿ.ಗಾಣಿಗೇರ ಮಂದೇವಾಲ, ರೂಪಾದೇವಿ ದಿ.ದೇವರಾಜ ಪಾಟೀಲ್ ಸ್ಮರಣಾರ್ಥ ಸಿದ್ಧಪ್ರಸಾದ ಪಾಟೀಲ್ ಇಬ್ರಾಹಿಂಪುರ ಇವರಿಂದ ದತ್ತಿ ನಿಧಿಗಳಿಗೆ ಚಾಲನೆ ನೀಡಲಾಯಿತು.