ಯಾದಗಿರಿ | ಕಂದಾಯ ಇಲಾಖೆ ನೌಕರರ ಕ್ರೀಡಾಕೂಟದ ಸಮಾರೋಪ

Update: 2024-12-16 11:47 GMT

ಯಾದಗಿರಿ : ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ 2024ನೇ ಸಾಲಿನ ಕಂದಾಯ ಇಲಾಖೆಯ ಕ್ರೀಡಾಕೂಟ ಸಮಾರೋಪ ಕಾರ್ಯಕ್ರಮ ಜರುಗಿತು.

ವಡಗೇರಾ ತಾಲ್ಲೂಕಿನ ಹುಲ್ಕಲ್ (ಜೆ) ಗ್ರಾಮ ಸಹಾಯ ಡೊಡ್ಡ ಮಾನಪ್ಪ ನಾಟೇಕರ್ ಅವರು ಬಾಲ್ಯದಿಂದಲೂ ಬಯಲಾಟದ ಹಲವಾರು ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡ ಇವರು ಮೈಹಿಷಾಸುರ ಮರ್ಧಿನಿ ಏಕಾಭಿನಯ ಪಾತ್ರದಲ್ಲಿ ನಟಿಸಿ ನೆರೆದಿದ್ದ ಎಲ್ಲ ಪ್ರೇಕ್ಷಕರ ಹಾಗೂ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು.

ಈ ವೇಳೆ ಭಜನಾ ಕಲಾವಿದರಿಂದ ಮತ್ತು ಹಲವು ಕಲಾ ತಂಡದಿಂದ ಕಲಾ ಪ್ರದರ್ಶನ ನಡೆದವು. ಕಾರ್ಯಕ್ರಮಕ್ಕೆ ಗ್ರಾಮದ, ಸುತ್ತಮುತ್ತ ಹಳ್ಳಿಯ ನೂರಾರು ಜನ ಮಹಿಳೆಯರು, ಹಿರಿಯರು, ಯುವಕರು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ., ಅಪರ ಜಿಲ್ಲಾಧಿಕಾರಿ ಶರಣಪ್ಪ ಕೊಟೆಪ್ಪಗೊಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಚುನಾವಣಾ ತಹಶೀಲ್ದಾರರಾದ ಸಂತೋಷಿರಾಣಿ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ದುಂಡಪ್ಪ ಕೋಮಾರ, ತಹಶೀಲ್ದಾರರಾದ ಬಸಲಿಂಗಪ್ಪ ನಾಯಕೋಡಿ, ಸುರೇಶ ಅಂಕಲಗಿ, ಶಾಂತಗೌಡ ಬಿರಾದಾರ, ಉಮಾಕಾಂತ ಹಳ್ಳೆ, ಹುಸ್ಸೇನ್ ಸರ್ಕಾವಸ್, ಶ್ರೀನಿವಾಸ ಚಾಪೇಲ್, ವಿಜಯೇಂದ್ರ ಹುಲಿನಾಯಕ, ಅನೀತಾ ರಾಜೇಂದ್ರ ಸಜ್ಜನ್, ಪಿ.ಶಾಂತಾ, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶಭ್ಬೀರ್ ಪಟೇಲ್, ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸೋಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಈಟೆ, ಸುರೇಂದ್ರ ಬಬಲಾದ, ವಿಜಯ ಸಿಂಗ್ ಸೇರಿದಂತೆ ಕಂದಾಯ ನೌಕರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News