ಯಾದಗಿರಿ | ಕಂದಾಯ ಇಲಾಖೆಯ ನೌಕರರ ಕ್ರೀಡಾಕೂಟಕ್ಕೆ ಚಾಲನೆ
ಯಾದಗಿರಿ : ಇಲ್ಲಿನ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಿಗೂ ಕ್ರೀಡಾಕೂಟದ ವ್ಯವಸ್ಥೆ ಮಾಡಬೇಕೆನ್ನುವ ಆಸ್ತಕಿ ತಮಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ರೇಖಾ ತಿಳಿಸಿದ್ದಾರೆ.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ನೌಕರರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ನೌಕರರು ಒತ್ತಡ ಜಾಸ್ತಿ. ಇದರ ನಿವಾರಣೆಗೆ ವಾಕಿಂಗ್, ಯೋಗ, ಸಂಗೀತ ಇತ್ಯಾದಿ ಮಾನಸಿಕ ಉಲ್ಲಾಸ ನೀಡುವ ಕ್ರಿಯೆಗಳನ್ನು ರೂಡಿ ಮಾಡಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಮಾತನಾಡಿ, ರಾಜ್ಯದಲ್ಲಿ ಯಾದಗಿರಿ ಜಿಲ್ಲೆಗೆ ಹಿಂದುಳಿದ ಪಟ್ಟಿ ಕಟ್ಟಿದ್ದಾರೆ. ಆದರೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಎಲ್ಲಾ ಅಂಶಗಳಲ್ಲಿ ಪ್ರಗತಿ ಸಾದಿಸಿರುವುದು ಹೆಮ್ಮೆಯ ವಿಷಯ ಎಂದರು.
ಕ್ರೀಡಾ ಕೂಟದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರಾದ ಮರಿಯಪ್ಪ ಅವರು ಕ್ರೀಡಾ ಪಟುಗಳಿಗೆ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ಶರಣಪ್ಪ ಕೊಟೆಪ್ಪಗೊಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಚುನಾವಣಾ ತಹಶೀಲ್ದಾರರಾದ ಸಂತೋಷರಾಣಿ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ದುಂಡಪ್ಪ ಕೋಮಾರ, ತಹಶೀಲ್ದಾರರಾದ ಬಸಲಿಂಗಪ್ಪ ನಾಯಕೋಡಿ, ಸುರೇಶ ಅಂಕಲಗಿ, ಶಾಂತಗೌಡ ಬಿರಾದಾರ, ಉಮಾಕಾಂತ ಹಳ್ಳೆ, ಹುಸ್ಸೇನ್ ಸರ್ಕಾವಸ್, ಶ್ರೀನಿವಾಸ ಚಾಪೇಲ್, ವಿಜಯೇಂದ್ರ ಹುಲಿನಾಯಕ, ಅನೀತಾ ರಾಜೇಂದ್ರ ಸಜ್ಜನ್, ಪಿ.ಶಾಂತಾ, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶಬ್ಬೀರ್ ಪಟೇಲ್, ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸೋಗಿ, ಜಿಲ್ಲಾ ಪ್ರಧಾನ ಕಾರ್ಯಯ ಮಲ್ಲಿಕಾರ್ಜುನ ಈಟೆ, ಸುರೇಂದ್ರ ಬಬಲಾದ, ವಿಜಯ ಸಿಂಗ್ ಸೇರಿದಂತೆ ಕಂದಾಯ ನೌಕರರು ಇದ್ದರು.