ಯಾದಗಿರಿ | ಡಿ.15 ರಂದು ಸಗರನಾಡು ಸಾಂಸ್ಕೃತಿಕ ಉತ್ಸವ, ಹತ್ತು ಕೃತಿಗಳ ಬಿಡುಗಡೆ : ಡಾ.ಸುರೇಶ ಸಜ್ಜನ್

Update: 2024-12-12 14:22 GMT

ಯಾದಗಿರಿ : ಡಿ.15 ರಂದು ಸುರಪುರ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ಸಗರನಾಡು ಸಾಂಸ್ಕೃತಿಕ ಉತ್ಸವ ಹಾಗೂ ಸಗರನಾಡ ಸಿರಿ ಸ್ಮರಣ ಗ್ರಂಥ ಸೇರಿ ವಿವಿಧ ಸಾಹಿತಿಗಳ ಹತ್ತು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದಶಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಸುರೇಶ ಸಜ್ಜನ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಿ ನಿಧಿಗಳಿಗೆ ಚಾಲನೆ, ಶಾಲೆಗಳಿಗೆ ಪುಸ್ತಕಗಳ ದೇಣಿಗೆ, ಸಾಧಕರಿಗೆ ಸಗರನಾಡು ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಲವಾರದ ಡಾ.ಸಿದ್ದತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದೇವರು ವಹಿಸಲಿದ್ದು, ಸಾನಿಧ್ಯವನ್ನು ದೇವಾಪುರ ಹಿರೇಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರು, ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ ವಹಿಸಲಿದ್ದು, ಸಚಿವ ಶರಣಬಸವಪ್ಪಗೌಡ ದರ್ಶನಾಪುರ ಉದ್ಘಾಟಿಸುವರು ಹಾಗೂ ಶಾಸಕ ರಾಜಾ ವೇಣುಗೋಪಾಲ ನಾಯಕ್‌ ಅಧ್ಯಕ್ಷತೆ ವಹಿಸುವರು ಎಂದರು.

ಸ್ಮರಣ ಗ್ರಂಥ ಕಲಬುರಗಿ ವಿಕಾಸ ಅಕಾಡೆಮಿ ಮುಖ್ಯಸ್ಥ ಬಸವರಾಜ ಪಾಟೀಲ್ ಸೇಡಂ ಲೋಕಾರ್ಪಣೆ ಮಾಡಲಿದ್ದು,10 ದತ್ತಿ ನಿಧಿಗಳಿಗೆ ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಚಾಲನೆ ನೀಡಲಿದ್ದು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸಗರನಾಡು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡುವರು, ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ 10 ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಿದ್ದು, ವಿವಿಧ ಗಣ್ಯರು 10 ಕೃತಿಗಳ ಲೋಕಾರ್ಪಣೆ ಮಾಡುವರು.

ಈ ಸಂದರ್ಭದಲ್ಲಿ ವಿವಿಧ ಅಕಾಡೆಮಿ ಪ್ರಾಧಿಕಾರಕ್ಕೆ ನೇಮಕಗೊಂಡ ಯಾದಗಿರಿ ಜಿಲ್ಲೆಯ ಸದಸ್ಯರು, ಕರ್ನಾಟಕ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕಿಶೋರ ಚಂದ್ ಜೈನ್ ಅವರಿಗೆ ಅಭಿನಂದನೆ ನೆರವೇರಲಿದೆ ಎಂದರು.

ಮಧ್ಯಾಹ್ನ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು,ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ, ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದ ಶಾಂತರುದ್ರಮುನಿ ಮಹಾಸ್ವಾಮೀಜಿ, ಕೆಂಭಾವಿ ಕಾಂತೇಶ್ವರ ಹಿರೇಮಠದ ಚೆನ್ನಬಸವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಕುಷ್ಟಗಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶರಣಪ್ಪ ವಡಗೇರಿ ಚಾಲನೆ ನೀಡಲಿದ್ದು, ಕಸಾಪ ತಾ.ಅಧ್ಯಕ್ಷ ಶರಣಬಸಪ್ಪ ಯಾಳವಾರ ಅದ್ಯಕ್ಷತೆ ವಹಿಸುವರು. ನಾಡಿನ ವಿವಿಧ ಕಲಾವಿದರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿವಿಧ ಜಾನಪದ ತಂಡಗಳಿಂದ ಜಾನಪದ ಗಾಯನ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಆಚರಣಾ ಸಮಿತಿ ಕಾರ್ಯಾಧ್ಯಕ್ಷರಾದ ರಾಜಾ ಮುಕುಂದ ನಾಯಕ, ಹೆಚ್.ಸಿ.ಪಾಟೀಲ್, ಉಪಾಧ್ಯಕ್ಷರಾದ ಮಲ್ಲಣ್ಣ ಸಾಹು ಮುಧೋಳ, ಪ್ರಕಾಶ ಸಜ್ಜನ್, ಮಲ್ಲಿಕಾರ್ಜುನ ಸತ್ಯಂಪೇಟೆ, ಕೋಶಾಧ್ಯಕ್ಷ ಕಿಶೋರ್‍ಚಂದ್ ಜೈನ್, ಸಗರನಾಡ ಸಿರಿ ಸ್ಮರಣ ಗ್ರಂಥ ಸಂಪಾದಕ ಎ.ಕವಲಾಕರ, ಶರಣಗೌಡ ಪಾಟೀಲ್ ಜೈನಾಪುರ,ನಬಿಲಾಲ ಮಕಾಂದಾರ್, ಶಿವಶರಣಪ್ಪ ಹೆಡಗಿನಾಳ, ಅಂಬ್ರೇಶ ಕುಂಬಾರ, ಲಕ್ಷ್ಮಣ ಗುತ್ತೇದಾರ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News