ಯಾದಗಿರಿ ಮತಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ : ಚೆನ್ನಾರಡ್ಡಿ ಪಾಟೀಲ್ ತುನ್ನೂರು

ಯಾದಗಿರಿ : ಯಾದಗಿರಿ ಮತಕ್ಷೇತ್ರವನ್ನು ಬರುವ ಮೂರು ವರ್ಷಗಳಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2024-25 ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿ ಯಾದಗಿರಿ ಮತಕ್ಷೇತ್ರದ ವಡಗೇರಾ ತಾಲೂಕಿನ ತೇಕರಾಳ ಗ್ರಾಮದಿಂದ ಬಸವನಗರ ಗ್ರಾಮದವರೆಗೆ 4.50 ಕಿ.ಮಿ. ರಸ್ತೆ ನಿರ್ಮಾಣ ಕಾಮಗಾರಿಯ 426.70 ಲಕ್ಷ ರೂ.ಗಳ ಕಾಮಗಾರಿ ಹಾಗೂ ಶಹಾಪೂರ ತಾಲೂಕಿನ ವಡಗೇರಾ ತಾಂಡದಲ್ಲಿ ಬೀರನಕಲ್ ಗ್ರಾಮದಿಂದ ವಡಗೇರಾ ಗೊಂದೆನೂರು ರಸ್ತೆಯವರೆಗೆ ವಾಯಾ ಬೀರನಕಲ್ ತಾಂಡಾ ಮತ್ತು ವಡಗೇರಾ ತಾಂಡಾ ಗ್ರಾಮದವರೆಗೆ 5.00 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿಯ 496.00 ಲಕ್ಷ ರೂ. ಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು.
ಕ್ಷೇತ್ರದ ಜನತೆಗೆ ಮೂಲಭೂತ ಸೌಲಭ್ಯಗಳ ಜೊತೆಗೆ ಅಗತ್ಯ ಸೌಲತ್ತುಗಳನ್ನು ಒದಗಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಕುಮಾರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳ್ಹಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹ ಅಧಿಕಾರಿ ಮಲ್ಲಿಕಾರ್ಜುನ ಸಂಗವಾರ್ , ಮಲ್ಲಿಕಾರ್ಜುನ ಈಟೆ, ಲಕ್ಷ್ಮಮಾರೆಡ್ಡಿ, ತಾಲೂಕು ಪಂಚ ಗ್ಯಾರಂಟಿ ಅಧ್ಯಕ್ಷ ಖಾಜಾ ಮೈನೋದಿನ್ ಮೀರ್ಚಿ, ಗುತ್ತಿಗೆದಾರ ದೀಪಕ್ ಯಲಸತ್ತಿ, ವಡಗೇರಾ ಪಿಎಸ್ ಐ ಮಹೆಬೂಬ ಅಲಿ,ಶರಣು ಪಡೀಶೆಟ್ಟಿ, ಶಿವರಾಜ ವಡಗೇರಾ, ಪಿಡಿಓ ಶರಣಗೌಡ ಉಳ್ಳೆಸುಗೂರ್, ಬಗರ ಹುಕಂ ನಾಮ ನಿರ್ದೇಶನ ಸದಸ್ಯರಾದ ಶಿವರಾಜ ಸಾಹು ಬಾವುರ್, ಪರಶುರಾಮ ವಕೀಲರು ಖಾನಾಪುರ, ಗೋಪಾಲ ನಾಯಕ, ಪಿಡಿಓ ಶರಣಗೌಡ, ವಡಗೇರಾ ಎಇಇ, ಸಾಬಣ್ಣ ಗೊಂದೆನೂರ್, ಗೋಪಾಲ ನಾಯಕ, ಅಮರೇಶ ಇದ್ದರು.