ಯಾದಗಿರಿ | ತಾಲೂಕು ಆಡಳಿತದ ವತಿಯಿಂದ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ

ಸುರಪುರ : ತಾಲೂಕು ಆಡಳಿತದ ವತಿಯಿಂದ ನಗರದಲ್ಲಿ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 118ನೇ ಜಯಂತಿ ಆಚರಿಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಟ್ಯಾಕ್ಟರ್ ಚಲಾಯಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ತಹಶೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ನಡೆಯಿತು.
ನಂತರ ನಡೆದ ಉಪನ್ಯಾಸ ಕಾರ್ಯಕ್ರಮದ ಆರಂಭದಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಶಿಕ್ಷಕ ಮೌನೇಶ ಗೋನಾಲ ಹಾಗೂ ಪತ್ರಾಂಕಿತ ಇಲಾಖೆ ಖಜಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್ ಅವರು ಬಾಬು ಜಗಜೀವನರಾಮ್ ಅವರ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಇಓ ಬಸವರಾಜ ಸಜ್ಜನ್, ನಗರಸಭೆ ಪೌರಾಯುಕ್ತ ಜೀವನಕುಮಾರ್ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹ್ಮದ್ ಸಲೀಂ ಹಾಗೂ ವಿಶೇಷ ಆಹ್ವಾನಿತರಾಗಿ ವಕೀಲ ಯಲ್ಲಪ್ಪ ಹುಲಿಕಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಪ್ರ.ಕಾರ್ಯದರ್ಶಿ ವಿಠ್ಠಲ್ ಯಾದವ್, ವೆಂಕಟೇಶ ಹೊಸ್ಮನಿ, ನಾಗಣ್ಣ ಕಲ್ಲದೇವನಹಳ್ಳಿ, ನಿಂಗಣ್ಣ ಬುಡ್ಡಾ, ದಾನಪ್ಪ ಕಡಿಮನಿ, ಕಮ್ರುದ್ದಿನ್, ಶಕೀಲ್ ಅಹ್ಮದ್ ಖುರೇಷಿ, ಎ.ಜಿ.ಕುಂಬಾರ,ಮಾಳಪ್ಪ ಕಿರದಳ್ಳಿ ಹಣಮಂತ ಕಟ್ಟಿಮನಿ,ಹಣಮಂತ ಬಿಲ್ಲವ್, ನಾಗರಾಜ ಓಕಳಿ, ಚಂದ್ರು ದಿವಳಗುಡ್ಡ, ಬಸವರಾಜ ಮುಷ್ಠಳ್ಳಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ನಗರದ ದೀವಳಗುಡ್ಡದಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಡಾ.ಬಾಬು ಜಗಜೀವನರಾಮ್ ಅವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗಿ ಸಿಹಿ ಹಂಚಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಚಂದ್ರು ದೊಡ್ಮನಿ, ರಾಜು ತುಳೆನೂರ್, ಭೀಮಣ್ಣ ದೊಡ್ಮನಿ,ಚಂದ್ರಕಾಂತ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಸಂತೋಷ ಕಟ್ಟಿಮನಿ, ಪರಶುರಾಮ ಅಗ್ನಿ,ಬಸವರಾಜ, ಭೀಮಣ್ಣ ಬುಡ್ಡ,ರವಿಚಂದ್ರ ಬುಡ್ಡ, ಪ್ರಕಾಶ ಅಗ್ನಿ, ಪರಶುರಾಮ್ ದೊಡ್ಮನಿ, ನಿಂಗಣ್ಣ ತುಳೆನೂರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.