ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜು ವಿದ್ಯಾರ್ಥಿಗಳ ಅಪ್ರತಿಮ ಸಾಧನೆ; 12 ರ‍್ಯಾಂಕ್, ಶೇ 100 ಫಲಿತಾಂಶ

Update: 2025-03-20 17:48 IST
ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜು ವಿದ್ಯಾರ್ಥಿಗಳ ಅಪ್ರತಿಮ ಸಾಧನೆ; 12 ರ‍್ಯಾಂಕ್, ಶೇ 100 ಫಲಿತಾಂಶ
  • whatsapp icon

ಮಂಗಳೂರು, ಮಾ.20: ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿದ್ಯಾಲಯವು 2024ನೇ ಸಾಲಿನಲ್ಲಿ ಆಯೋಜಿಸಿದ ಅಂತಿಮ ಎಂಬಿಬಿಎಸ್ (ಜನರಲ್ ಮೆಡಿಸಿನ್) ಪದವಿ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ಕಣಚೂರು ವೈದ್ಯಕೀಯ

ಶಿಕ್ಷಣ ಕಾಲೇಜು ಶೇ 100 ಫಲಿತಾಂಶ ದಾಖಲಿಸಿದೆ. ಹಾಗೂ ಕಾಲೇಜಿನ 12 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ.

ಅಲಿಮತ್ ಶಿರಿನಾ ಕೆ.ಪಿ (3ನೇ ರ‍್ಯಾಂಕ್), ಪ್ರಮೋದ್ ಕೆ.ಆರ್ (3ನೇ ರ‍್ಯಾಂಕ್) ದೇವಂಶು ನಾಗ್ಡ (4ನೇ ರ‍್ಯಾಂಕ್),ರೀಟಾ ಗ್ಲೋರಿ ಕೆ.ವಿ (5ನೇ ರ‍್ಯಾಂಕ್ಕ್) ನಜೀಬ್ ಯುರ್ ರೆಹಮಾನ್ ಖಾನ್ (6ನೇ ರ‍್ಯಾಂಕ್), ಸುಮೈ ಶಹಿದ ಮಸೂದ್ (6ನೇ ರ‍್ಯಾಂಕ್), ಆಸಿಫ್ ಮಕ್ಬುಲ್ ಹುಸೈನ್ ಅಕ್ಬರ್ (7ನೇ ರ‍್ಯಾಂಕ್), ಮುಹಮ್ಮದ್ ಒವಿಸ್ ಕಲ್ಮನಿ (8ನೇ ರ‍್ಯಾಂಕ್) ಶ್ರಾವ್ಯ (8ನೇ ರ‍್ಯಾಂಕ್), ಆಯಿಶಾ ತಸ್‌ಮಿನ್ (10ನೇ ರ‍್ಯಾಂಕ್) ನಸೀಮಾ ಪರ್ವಿನ್ (10ನೇ ರ‍್ಯಾಂಕ್) ಸೃಜನ್ ರಾಜ್ ಶೆಟ್ಟಿ (10ನೇ ರ‍್ಯಾಂಕ್) ಗಳಿಸಿದ್ದಾರೆ.

ಸ್ನಾತಕೋತ್ತರ ವಿಭಾಗ ಶೇ 100 ಸಾಧನೆ: ಸ್ನಾತಕೋತ್ತರ ಎಂ.ಡಿ (ಜನರಲ್ ಮೆಡಿಸಿನ್) ಪರೀಕ್ಷೆಯಲ್ಲಿ 5 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿ ಶೇ 100 ಫಲಿತಾಂಶ ದಾಖಲಿಸಿದ್ದಾರೆ. ಡಾ. ಮಹಮ್ಮದ್ ಬಿಲಾಲ್ ಹುಸೈನ್, ಡಾ.ಅತಿಬ್ ಅಹಮ್ಮದ್ ಕೆ.ಎ., ಡಾ.ಸ್ನೇಹಲ್ ರಾಜ್‌ಕುಮಾರ್ ಕೂಟ್, ಡಾ.ವೈ. ಪ್ರಣೀತ್ ಚರಣ್ ರೆಡ್ಡಿ, ಡಾ. ಹನುಮಂತಕಾರಿ ಪ್ರದು ವಿಜಾರಣಾ.

ವಿದ್ಯಾರ್ಥಿಗಳು ಅಪೂರ್ವ ಶೈಕ್ಷಣಿಕ ಸಾಧನೆಗೆ ತಮ್ಮ ಪ್ರಾಧ್ಯಾಪಕ ಹಾಗೂ ವಿಭಾಗೀಯ ಮುಖ್ಯಸ್ಥರಾದ ಡಾ. ದೇವದಾಸ ರೈಯವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಹಾಗೂ ಶ್ರೇಷ್ಠ ಮಟ್ಟದ ಉಪನ್ಯಾಸ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಹಾಜಿ ಯು.ಕೆ. ಮೋನು ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರಾದ ಅಬ್ದುಲ್ ರಹಮಾನ್ ಅವರು ವಿದ್ಯಾರ್ಥಿಗಳ ಅಮೋಘ ಸಾಧನೆಯನ್ನು ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News