ಪಚ್ಚನಾಡಿ| ಮನೆಯ ಆವರಣ ಗೋಡೆ ಧ್ವಂಸ: 17 ಮಂದಿಯ ವಿರುದ್ಧ ಪ್ರಕರಣ ದಾಖಲು
Update: 2025-03-18 18:12 IST

ಮಂಗಳೂರು, ಮಾ.18: ಮಹಾನಗರ ಪಾಲಿಕೆಯ ಪಚ್ಚನಾಡಿ ವಾರ್ಡ್‌ನ ಶ್ರೀ ವೈದ್ಯನಾಥ ನಗರದಲ್ಲಿ ರಸ್ತೆ ವಿಸ್ತರಣೆ ನೆಪವೊಡ್ಡಿ ಕೆಲವು ಮಂದಿ ಖಾಸಗಿ ವ್ಯಕ್ತಿಯೊಬ್ಬರ ಮನೆ ಆವರಣ ಗೋಡೆ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೊಲೀಸರು 17 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನಪಾ ಅಥವಾ ಸರಕಾರಕ್ಕೆ ಸಂಬಂಧಿಸಿದವರ ನಿರ್ದೇಶನವಿಲ್ಲದೆ ಮಾ.14ರಂದು ಏಕಾಏಕಿಯಾಗಿ ಆವರಣ ಗೋಡೆ ಧ್ವಂಸಗೊಳಿಸಲಾಗಿದೆ ಎಂದು ಸ್ಫೂರ್ತಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.