ಸುರತ್ಕಲ್:‌ "ದಿ ಇಂಜಿನಿಯರ್ 2024" ಉದ್ಘಾಟನೆ

Update: 2024-10-17 15:51 GMT

ಸುರತ್ಕಲ್:‌ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸುರತ್ಕಲ್ ಇದರ ವತಿಯಿಂದ ಆಯೋಜಿಸಲಾಗುವ ವಾರ್ಷಿಕ ತಾಂತ್ರಿಕ ಉತ್ಸವವಾದ "ದಿ ಇಂಜಿನಿಯರ್ 2024" ಎನ್‌ಐಟಿಕೆ ಕ್ಯಾಂಪಸ್‌ ನಲ್ಲಿ ಗುರುವಾರ ಉದ್ಘಾಟನೆ ಗೊಂಡಿತು.

ಎನ್ಚ್ಯಾಂಟೆಡ್ ಕಾಸ್ಮೊಸ್ ವಿಷಯವು ವಿಶಾಲವಾದ ಬ್ರಹ್ಮಾಂಡದ ನಾವೀನ್ಯತೆ, ಕುತೂಹಲ ಮತ್ತು ಅನ್ವೇಷಣೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದ್ದು, ವಾರ್ಷಿಕ ತಾಂತ್ರಿ ಉತ್ಸವವು ಅ. 17ರಿಂದ 20ರವರೆಗೆ ನಡೆಯಲಿದೆ. ಈ ಸಂಭ್ರಮದಲ್ಲಿ 25 ಸಾವಿಕ್ಕೂ ಹೆಚ್ಚಿನ ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.

ವಾರ್ಷಿಕೋತ್ಸವದ ಪ್ರಯುಕ್ತ ಹ್ಯಾಕಥಾನ್, ಆಟೋ ಎಕ್ಸ್‌ಪೋ, ಗೇಮಿಂಗ್ ಈವೆಂಟ್‌ಗಳು, ಟೆಕ್‌ನೈಟ್ಸ್ ಪ್ರಾಜೆಕ್ಟ್‌ಗಳು, ರೋಬೋಕಾನ್ಸ್ ಎಕ್ಸ್‌ಪೋ, ಟ್ರೋನಿಕ್ಸ್ ಎಕ್ಸ್‌ಪೋ ಸೇರಿದಂತೆ ವಿವಿಧ ತಾಂತ್ರಿಕ ಡೊಮೇನ್‌ಗಳಲ್ಲಿ 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಡ್ರೋನ್ ರೇಸಿಂಗ್, ವರ್ಚುವಲ್ ಸ್ಕೈ ಟೂರ್, ಎಂಜಿ ಟಾಕ್ಸ್, ಎಸಿಎಂ ವಿಆರ್ ಎಕ್ಸ್‌ಪೋ, ಟೆಕ್ ಮೇಳ ಮತ್ತು ಪ್ರೊ ಶೋ ಸೇರಿಂತೆ ಹಲವು ಪ್ರಕಾರದ ಮೇಳಗಳು ನಡೆಯಲಿವೆ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎನ್‌ಐಟಿಕೆ ಉಪನಿರ್ದೇಶಕ ಪ್ರೊ. ಸುಬಾಷ್ ಸಿ. ಯರಗಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂ.ಲಿ. ನ ಆಡಳಿತ ನಿರ್ದೇಶಕಿ ಶಿಲ್ಪಾ. ಆರ್., ಗೌರವ ಅತಿಥಿಯಾಗಿ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂ.ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಎ.ಸಿ. ಹೆಗಡೆ, ಡಾ.ಎಸ್.ಬಿ.ಆರ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News