ಅ.19: ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವ ವಿದ್ಯಾಲಯದ ಘಟಿಕೋತ್ಸವ

Update: 2024-10-17 12:44 GMT

ಕೊಣಾಜೆ: ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವ ವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭವು ಅ. 19 ರಂದು ಬೆಳಿಗ್ಗೆ 10 ಗಂಟೆಗೆ ದೇರಳಕಟ್ಟೆಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.

ಈ ಸಮಾರಂಭದಲ್ಲಿ 2632 ಅಭ್ಯರ್ಥಿಗಳಿಗೆ ದಂತವೈದ್ಯ, ವೈದ್ಯಕೀಯ, ನರ್ಸಿಂಗ್, ಅಲ್ಲಾಯಿಡ್ ಹೆಲ್ತ್ ಹಾಗೂ ಬೇಸಿಕ್ ಸೈನ್ಸ್, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ, ಔಷಧಶಾಸ್ತ್ರ, ಕಲೆ ಮತ್ತು ಸಾಮಾಜಿಕ ವಿಜ್ಞಾನ ವಿಭಾಗಗಳ ಮೂಲಕ ಪೋಸ್ಟ್ ಡೊಕ್ಟೋರಲ್ ಫೆಲೋಷಿಪ್ , ಸ್ನಾತಕೋತ್ತರ ಪದವಿಗಳು, ಸ್ನಾತಕೋತ್ತರ ಡಿಪ್ಲೊಮಾಗಳು ಮತ್ತು ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಗುವುದು. ಜೊತೆಗೆ 25 ಅಭ್ಯರ್ಥಿಗಳಿಗೆ ಪಿಹೆಚ್.ಡಿ ಪದವಿಗಳನ್ನು ಪ್ರದಾನ ಮಾಡಲಾ ಗುವುದು ಹಾಗೂ ವಿವಿಧ ಸ್ನಾತಕ ಕೋರ್ಸ್ ಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ 10 ಚಿನ್ನದ ಪದಕಗಳನ್ನು ನೀಡಿ ಪುರಸ್ಕರಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಭಾರತದ ಜಿ 20 ಶೆರ್ಪಾ ಮತ್ತು ನೀತಿ ಆಯೋಗದ ಮಾಜಿ ಸಿಇಒ ಶ್ರೀ ಅಮಿತಾಭ್ ಕಾಂತ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ .

ಸೆಂಟರ್ ಫಾರ್ ಸೆಲ್ಲುಲರ್ & ಮೋಲಿಕ್ಯೂಲರ್ ಪ್ಲಾಟ್‌ಫಾರ್ಮ್ಸ್ (C-CAMP), ಬೆಂಗಳೂರು ನ ನಿರ್ದೇಶಕ ಮತ್ತು ಸಿಇಒ ಡಾ. ತಸ್ಲಿಮರಿಫ್ ಸಯ್ಯದ್,ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯ ಉಪ ಕುಲಪತಿಗಳಾದ ಡಾ. ಎಂ. ವಿಜಯಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಲಿದ್ದಾರೆ. ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯ ಕುಲಾಧಿಪತಿಗಳಾದ ಡಾ. ಯೆನೆಪೋಯ ಅಬ್ದುಲ್ಲ ಕುoಞಿ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ.

ಈ ಸಮಾರಂಭದಲ್ಲಿ ವಿಶ್ವವಿದ್ಯಾಲಯ ಶಾಸನ ಬದ್ಧ ಆಧಿಕಾರಿಗಳು, ಡೀನ್‌ಗಳು, ಕೇಂದ್ರದ ಮುಖ್ಯಸ್ಥರು, ಅಂಗ ಸಂಸ್ಥೆ ಗಳ ಶಿಕ್ಷಕ ವೃಂದ ಹಾಗೂ ಅಕಾಡೆಮಿಕ್ ಕೌನ್ಸಿಲ್, ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ ಸದಸ್ಯರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News