ಸಿನರ್ಜಿಯಾ 2024 ಏರ್ ಶೋ: ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಹಾರಾಡಿದ ಪುಟಾಣಿ ವಿಮಾನಗಳು

Update: 2024-11-09 14:47 GMT

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ವತಿಯಿಂದ ಎಂಫಾಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಿನರ್ಜಿಯ 2024 ರಾಷ್ಟ್ರೀಯ ಕಾರ್ಯಕ್ರಮದ ಅಂತಿಮ ದಿನವಾದ ಶನಿವಾರ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಪುಣಾಣಿ ವಿಮಾನಗಳು ಡ್ರೋನ್ ತಂತ್ರಜ್ಞಾನದ ಸಲಕರಣೆಗಳ ಸಹಾಯದಿಂದ‌ ಕ್ರೀಡಾಂಗಣದಲ್ಲಿ ಹಾರಾಟ ನಡೆಸಿತು.

ಅಭಯ್ ಪವಾರ್ ಅವರ ಮಾರ್ಗ ದರ್ಶನದಲ್ಲಿ ಏರ್ ಶೋ ನಡೆಯಿತು. ಈ ಪ್ರದರ್ಶನದಲ್ಲಿ 9ರಿಂದ 12 ವಿಮಾನ, ಹೆಲಿಕಾಪ್ಟರ್ ಮಾದರಿಗಳು ಹಾರಾಟ ನಡೆಸಿದವು ಈ ಪೈಕಿ ಸುಮಾರು 8 ಮಾದರಿಯ ಪುಟಾಣಿ ವಿಮಾನಗಳು ಸಹ್ಯಾದ್ರಿ ಯ ಚ್ಯಾಲೆಂಜರ್ಸ್ ಸ್ಟಾರ್ಟ್ ಅಫ್ ನಿಂದ ನಿರ್ಮಿಸಲಾಗಿರುವುದು ವಿಶೇಷವಾಗಿತ್ತು. ಏರ್ ಶೋ ನಲ್ಲಿ 150ರಿಂದ 200 ಕಿ.ಮೀ ವೇಗದಲ್ಲಿ ಸಂಚರಿಸುವ 9 ಅಡಿ ಉದ್ದದ ವಿಮಾನದ ಮಾದರಿ ಅತ್ಯಂತ ದೊಡ್ಡ ಮಾದರಿಯ ವಿಮಾನವಾಗಿತ್ತು.

ಸಂಘಟಕರಾದ ಡಾ.ಪ್ರಶಾಂತ್ ರಾವ್ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯ ರಿಂಗ್ ಮತ್ತು ಗಣಿತಶಾಸ್ತ್ರದಲಿ,, (STEM) ಹೊಸ ಆವಿಷ್ಕಾರ ಮತ್ತು ಸಾಧನೆ ಮತ್ತು ಎಳೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಹಮ್ಮಿಕೊಂಡ ಸಿನರ್ಜಿಯಾ 2024ರಾಷ್ಟ್ರೀ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನ.7 ರಿಂದ 9 ರವರೆಗೆ ನಡೆದ ಸಿನರ್ಜಿಯಾ 2024 ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ಸಂಸ್ಥೆಗಳಿಂದ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ವರ್ಷದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (SSTH) ನ 11 ನೇ ಆವೃತ್ತಿಯು ಕರಾವಳಿ ಕರ್ನಾಟಕದ 25 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ 500 ಹುಡುಗಿಯರಿಗೆ ಸ್ಪೂರ್ತಿ ನೀಡಲು ಸಿದ್ಧವಾಗಿದೆ. ಇದು ದುಹಿಳೆಯರಿಗೆ STEM ವೃತ್ತಿ ಜೀವನವನ್ನು ಉತ್ತೇಜಿಸಲು ಎಂಫಾಸಿಸ್ ಫೌಂಡೇಶನ್ ನಿಂದ ಬೆಂಬಲಿತವಾಗಿದೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ನಾಯಕತ್ವದ ತಂಡವು ಮಾರ್ಗದರ್ಶನ ನೀಡುವ ಈ ಕಾರ್ಯಕ್ರಮವು 275 ಶಾಲೆಗಳು ಮತ್ತು ಕಾಲೇಜುಗಳಿಂದ ಆಯ್ಕೆ 1,000 ವಿದ್ಯಾರ್ಥಿಗಳಿಗೆ ನವೆಂಬರ್ 9 ರಂದು ಪ್ರಾದೇಶಿಕ ಸವಾಲುಗಳಿಗೆ ನವೀನ ಪರಿಹಾರಗಳನ್ನು ಪ್ರಸ್ತುತಪಡಿಸಲು ವೇದಿಕೆಯನ್ನು ಒದಗಿಸಲಾಗಿತ್ತು.ಈ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿ ಗಳು ತಾವು ನಿರ್ಮಿಸಿದ ಮಾದರಿಗಳನ್ನು ಪ್ರದರ್ಶಿಸಿದರು ಆಯ್ಕೆಯಾದ ಸುಮಾರು 20 ಪ್ರೊಜೆಕ್ಟ್ ಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ನೆರವು ನೀಡಲಾಗುವುದು ಎಂದವರು ಮಾಹಿತಿ ನೀಡಿದರು.

ಸಹ್ಯಾದ್ರಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ತಾಂತ್ರಿಕ ಸೌಲಭ್ಯಗಳಿಗೆ ಪ್ರವೇಶವನ್ನು ಒದಗಿಸುವ ಎರಡು ದಿನಗಳ ಆನ್-ಕ್ಯಾಂಪಸ್ ಮೆಂಟರ್ ಶಿಪ್ ನಿಂದ ಅಮೂಲ್ಯವಾದ ಮಾರ್ಗದರ್ಶ ನವನ್ನು ನೀಡುವ ಮೂಲಕ ಯುವ ವಿದ್ಯಾರ್ಥಿಗಳಿಗೆ ಭವಿಷ್ಯದ ಬದಲಾವಣೆ ಮಾಡುವವರ ಅಭಿವೃದ್ಧಿಯನ್ನು ಉತ್ತೇಜಿಸಲುಸ್ಪಮ್ ಪ್ರಯೋಜನ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಹ್ಯಾದ್ರಿ ಓಪನ್ ಸೋರ್ಸ್ ಕಮ್ಯುನಿಟಿ (SOSC) ಆಯೋಜಿಸಿರುವ 24-ಗಂಟೆಗಳ ಹ್ಯಾಕಥಾನ್, ಇ-ಕ್ರೀಡೆಗಳು ಕಾರ್ಯಾ ಗಾರಗಳು ಮತ್ತು ಟೆಕ್ ಮಾತುಕತೆಗಳನ್ನು ಒಳಗೊಂಡಿರುತ್ತದೆ,ರೋಟೋನಾಕರ್ ಮತ್ತು ರೈನ್ ಫಾರೋಪರ್ ಚಾಲೆಂಜ್ ಸೇರಿದಂತೆ ವಿವಿಧ ಕಾರ್ಯಕ್ರಮ ಗಳು ನಡೆಯಿತು.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News