ಕುವೈತ್ ಫಾಹೀಲ್ ಸಾಟರ್ಡೆ ಲೀಗ್ ಸೀಸನ್-4: ʼಶೈನಿಂಗ್ ಮಂಗಳೂರುʼ ತಂಡ ಚಾಂಪಿಯನ್
ಕುವೈತ್, ನ.9: ಫಾಹೀಲ್ ಕ್ರಿಕೆಟ್ ಕ್ಲಬ್ಸ್ ವತಿಯಿಂದ ನಡೆದ ಲೀಗ್ ಕಮ್ ನಾಕ್‌ಔಟ್ ಮಾದರಿಯ ಪಂದ್ಯಾಟದಲ್ಲಿ ಶೈನಿಂಗ್ ಮಂಗಳೂರು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿವೆ.
ಮೊದಲ ಸೆಮಿಫೈನಲ್ ಪಂದ್ಯವು ಫಾಹೀಲ್ ಸ್ಟ್ರೈಕರ್ಸ್ ಮತ್ತು ಶೈನಿಂಗ್ ಮಂಗಳೂರು ನಡುವೆ ನಡೆಯಿತು. ಫಾಹೀಲ್ ಸ್ಟ್ರೈಕರ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಶೈನಿಂಗ್ ಮಂಗಳೂರು ತಂಡವು ನಿಗದಿತ 16 ಓವರ್ ಗಳಲ್ಲಿ 97ಕ್ಕೆ ಆಲೌಟ್ ಆಯಿತು.
ಗುರಿಯನ್ನು ಬೆನ್ನತ್ತಿದ ಫಾಹೀಲ್ ಸ್ಟ್ರೈಕರ್ಸ್ ತಂಡ 16 ಓವರ್‌ಗಳಲ್ಲಿ 97/9 ಗಳಿಸಿದ ಪರಿಣಾಮ ಪಂದ್ಯ ಟೈ ಆಯಿತು. ಸೂಪರ್ ಓವರ್ ಪಂದ್ಯದಲ್ಲಿ ಶೈನಿಂಗ್ ಮಂಗಳೂರು ತಂಡವು ಜಯಗಳಿಸಿ ಫೈನಲ್ ಪ್ರವೇಶಿಸಿದರೆ, ಚೇಸಿಂಗ್ ಬೌನ್ಸರ್ ಕೇರಳ ಲೆಜೆಂಡ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯವು ಚೇಸಿಂಗ್ ಬೌನ್ಸರ್ ಮತ್ತು ಶೈನಿಂಗ್ ಮಂಗಳೂರು ನಡುವೆ ನಡೆಯಿತು. ಶೈನಿಂಗ್ ಮಂಗಳೂರು ತಂಡದ ನಾಯಕ ಮುಹಮ್ಮದ್ ಶರೀಫ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಚೇಸಿಂಗ್ ಬೌನ್ಸರ್ ತಂಡ 16 ಓವರ್‌ಗಳಲ್ಲಿ ಕೇವಲ 129 ರನ್ನಿಗೆ ಆಲೌಟ್ ಆಯಿತು.
ಶೈನಿಂಗ್ ಮಂಗಳೂರು ತಂಡದ ರಾಣಾ 3 ಓವರ್‌ನಲ್ಲಿ 19ರನ್ ನೀಡಿ 4 ವಿಕೆಟ್ ಪಡೆದರೆ, ರವಿರಾಜ್ ಕೋಟ್ಯಾನ್ 4 ಓವರ್‌ನಲ್ಲಿ 28ರನ್ ನೀಡಿ 2 ವಿಕೆಟ್ ಪಡೆದರು. ಕಠಿಣ ಗುರಿಯನ್ನು ಬೆನ್ನಟ್ಟಿದ ಶೈನಿಂಗ್ ಮಂಗಳೂರು ತಂಡ ಕೇವಲ 12.2 ಓವರ್‌ಗಳಲ್ಲಿ 130/3 ಗಳಿಸಿ ಗೆಲುವು ಸಾಧಿಸಿತು.
ಶೈನಿಂಗ್ ಮಂಗಳೂರು ತಂಡದ ರಿಫಾಝ್ ಮಲಿಕ್ 26 ಎಸೆತದಲ್ಲಿ 53 ರನ್, ವೀರೇಂದ್ರ ಶರ್ಮಾ 30 ಎಸೆತದಲ್ಲಿ 43 ರನ್,ರಾಣಾ ಕೇವಲ 10 ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿ 24 ರನ್ ಗಳಿಸಿದರು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ರಾಣಾ ಗಳಿಸಿದರೆ, ಟೂರ್ನ್‌ಮೆಂಟ್‌ನ ಉತ್ತಮ ಬ್ಯಾಟ್ಸ್‌ಮನ್ ಶೈನಿಂಗ್ ಮಂಗಳೂರು ತಂಡದ ರಿಫಾಝ್ ಮಲಿಕ್ ಮತ್ತು ಉತ್ತಮ ಎಸೆತೆಗಾರ ನಸಿಫ್ ಉಳ್ಳಾಲ್ ತಮ್ಮದಾಗಿಸಿಕೊಂಡರು. ಅಮಲ್ ಮುಸ್ತಕ್ಬಲ್ ಮೊಬೈಲ್ ಡೀಲರ್ ಆಗಿರುವ ಮಂಗಳೂರು ಮೂಲದ ಉದ್ಯಮಿ ಮಹಮ್ಮದ್ ಶರೀಫ್ ನಾಯಕತ್ವದ ಶೈನಿಂಗ್ ಮಂಗಳೂರು ತಂಡವು ಕುವೈತ್‌ನ ಬಲಿಷ್ಠ ತಂಡವಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸ್ಪಾರ್ಕ್ ಜನರೇಟರ್ ಕುವೈತ್‌ನ ಮಾಲಕ ನೂರ್ ಮುಹಮ್ಮದ್ ಮತ್ತು ಅರಫಾ ಸೂಪರ್ ರ್ಮಾರ್ಕೆಟ್‌ನ ಇಬ್ರಾಹೀಂ ಕಣ್ಣೂರ್ ಬಹುಮಾನ ವಿತರಿಸಿದರು. ತಂಡದ ಕೋಚ್ ನಾಸಿರ್ ಕುತ್ತಾರ್, ವ್ಯವಸ್ಥಾಪಕ ನವೀನ್ ಡಿಸೋಜ, ಮಾರ್ಗದರ್ಶಕ ಬದ್ರುದ್ದೀನ್ ಮುನೀರ್ ಉಪಸ್ಥಿತರಿದ್ದರು. ಶೈನಿಂಗ್ ಮಂಗಳೂರು ತಂಡದ ಮ್ಯಾನೇಜರ್ ತಮೀಮ್ ಉಳ್ಳಾಲ್ ವೀಕ್ಷಕ ವಿವರಕರಾಗಿ ಸಹಕರಿಸಿದರು.