ಅ.18: ವಿವಿಧೆಡೆ ವಿದ್ಯುತ್ ನಿಲುಗಡೆ

Update: 2024-10-16 16:43 GMT

ಮಂಗಳೂರು,ಅ.16: ಕರಂಗಲ್ಪಾಡಿ ಫೀಡರ್ ವ್ಯಾಪ್ತಿಯ ವಿವಿಧೆಡೆ ಅ.18 ರಂದು ವಿದ್ಯುತ್ ನಿಲುಗಡೆಯಾಗಲಿದೆ. ಕದ್ರಿ ಉಪಕೇಂದ್ರದಿಂದ ಹೊರಡುವ ಕರಂಗಲ್ಪಾಡಿ ಫೀಡರ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಗಣೇಶ್ ರಾವ್ ಲೇನ್, ಪಿಂಟೋಸ್ ಲೇನ್, ಕರಂಗಲ್ಪಾಡಿ ಮಾರ್ಕೆಟ್, ಪಿವಿಎಸ್ ವೃತ್ತ, ಶಿವಭಾಗ್ 1ರಿಂದ 5ನೇ ಕ್ರಾಸ್,ಇಎಸ್‌ಐ, ಗೀತಾಂಜಲಿ, ಲೋವರ್ ಬೆಂದೂರು, ತಾರೇತೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News