ಬಜ್ಪೆ: ಮುಂಬೈ ಪೊಲೀಸ್‌ ಅಧಿಕಾರಿ ಎಂದು ನಂಬಿಸಿ ಯುವಕನಿಗೆ ವಂಚನೆ

Update: 2024-10-16 17:40 GMT

ಬಜ್ಪೆ: ಮುಂಬೈ ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಯೋರ್ವ ಬಜ್ಪೆ ಮೂಲದ ವ್ಯಕ್ತಿಯೊಬ್ಬರಿಂದ ಆನ್‌ ಲೈನ್‌ ಮೂಲಕ ಬರೋಬ್ಬರಿ 30ಲಕ್ಷ ರೂ. ದೋಚಿರುವ ಘಟನೆ ವರದಿಯಾಗಿದೆ.

ಸಂತ್ರಸ್ತನಿಗೆ ಕರೆಮಾಡಿದ್ದ ಅಪರಿಚಿತನೋರ್ವ ತಮ್ಮ ಹೆಸರಿನಲ್ಲಿ ಬ್ಯಾಂಕಿನ 25 ಖಾತೆಗಳು ತೆರೆಯಲಾಗಿದ್ದು, ನಿಮ್‌ ಖಾತೆಗಳಲ್ಲಿ ಅಪರಿಚಿತರು ವ್ಯವಹಾರ ನಡೆಸುತ್ತಿದಾರೆ ಎಂದು ಬೆದರಿಕೆ ಕರೆ ಮಾಡಿದ್ದ. ಸಂತ್ರಸ್ತನು ಅಪರಿಚಿತನ ಕರೆಗೆ ಹೆದರಿ ಆತ ಹೇಳಿದಂತೆ ಅವರ ಐಸಿಐಸಿಐ ಬ್ಯಾಂಕ್‌ ಖಾತೆಯಲ್ಲಿದ್ದ ಸುಮಾರು 30 ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ಜಮಾ ಮಾಡಿಸಿಕೊಂಡಿದ್ದಾನೆ. ಅಲ್ಲದೆ, ತಮ್ಮ ಖಾತೆ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ರಿಸರ್ವ್ ಬ್ಯಾಂಕ್‌ ತಮ್ಮ ಹಣವನ್ನು ಹಿಂದಿರುಗಿಸಲಿದೆ ಎಂದು ಹೇಳಿದ್ದಾನೆ.

ಇದನ್ನು ನಂಬಿದ ಸಂತ್ರಸ್ತನು ಹಣ ವಾಪಾಸ್‌ ಬಾರದೇ ಇರುವುದನ್ನು ಮನಗಂಡು ತನ್ನ ಬ್ಯಾಂಕ್‌ ನಲ್ಲಿ ವಿಚಾರಿಸಿದ್ದಾನೆ. ಆಗ ಆತ ಮೋಸ ಹೋಗಿರುವುದು ತಿಳಿದಿದೆ. ಈ ಸಂಬಂಧ ಸಂತ್ರಸ್ತ ವ್ಯಕ್ತಿ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News