ಅ.27ರಂದು ‘ಅಲೋಯ್ ಕ್ವಿಝಾರ್ಡ್’ ರಸಪ್ರಶ್ನೆ ಸ್ಪರ್ಧೆ

Update: 2024-10-25 12:16 GMT

ಮಂಗಳೂರು: ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಹಳೇವಿದ್ಯಾರ್ಥಿ ಸಂಘದ ವತಿಯಿಂದ ಅ. 27 ರಂದು ಕೊಡಿ ಯಾಲ್‌ ಬೈಲ್‌ನಲ್ಲಿರುವ ಶಾಲೆಯಲ್ಲಿ ವಿಭಿನ್ನ ರೀತಿಯ ರಸಪ್ರಶ್ನೆ ಸ್ಪರ್ಧೆ ‘ಅಲೋಯ್ ಕ್ವಿಝಾರ್ಡ್’ ಆಯೋಜಿಸಲಾಗಿದೆ.

ವಿಶೇಷ ಮಕ್ಕಳು ಮತ್ತು ಇತರ ಸಾಮಾನ್ಯ ಮಕ್ಕಳನ್ನು ಒಂದು ಅನನ್ಯ ರೀತಿಯಲ್ಲಿ ಈ ಸ್ಪರ್ಧೆ ಒಟ್ಟುಗೂಡಿಸುತ್ತದೆ. ಪ್ರತಿ ತಂಡವು ಓರ್ವ ದೃಷ್ಟಿಮಾಂದ್ಯ, ಒಬ್ಬರು ವಾಕ್ ಮತ್ತು ಶ್ರವಣ ದೋಷ ಹೊಂದಿರುವವರು, ಸಾರ್ವಜನಿಕ ಸರ್ಕಾರಿ ಶಾಲೆಯ ಒಬ್ಬ ವಿದ್ಯಾರ್ಥಿ ಮತ್ತು ಖಾಸಗಿ ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ ಎಂದು ಹಳೇ ವಿದ್ಯಾರ್ಥಿ ಸಂಘದ ಸಂಚಾಲಕ ಫಾ.ಜಾನ್ಸನ್ ಪಿಂಟೊ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಸಪ್ರಶ್ನೆಯು ಸಾಮಾನ್ಯ ಜ್ಞಾನಕ್ಕೆ ಆದ್ಯತೆ ನೀಡಲಿದೆ. ಟೀಮ್‌ವರ್ಕ್‌ನ ಪ್ರಜ್ಞೆಯನ್ನು ಬೆಳೆಸಲು, ನೈಸರ್ಗಿಕ ಅಡೆತಡೆಗಳನ್ನು ನಿವಾರಿಸಲು ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಲಿದೆ. ತಲಾ ಐದು ವಿದ್ಯಾರ್ಥಿಗಳು ಒಳಗೊಂ ಡಿರುವ ಒಟ್ಟು 10 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದು ಅವರು ವಿವರಿಸಿದರು.

ಸಂಘದ ಸಮನ್ವಯ ಅಧಿಕಾರಿ ಸೆಲೆಸ್ಟಿನ್ ವಾಝ್, ಅಧ್ಯಕ್ಷ ಡಾ.ಕ್ರಿಸ್ಟೋಫರ್ ಡಿಸೋಜ, ಕಾರ್ಯದರ್ಶಿ ನೈಲ್ ರೋಡ್ರಿಗಸ್ ಮತ್ತು ಕೋಶಾಧಿಕಾರಿ ಡಾ.ಮಧುಕರ್ ಎಸ್‌ಎಂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News