ಬಲೆ ತುಳು ಓದುಗ ಅಭಿಯಾನಕ್ಕೆ ಚಾಲನೆ

Update: 2024-10-25 15:33 GMT

ಮಂಗಳೂರು: ಬರೆಯುವುದರ ಜೊತೆಗೆ ಓದಿಸುವುದು ಅತ್ಯಗತ್ಯವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ತುಳು ಅಕಾಡ ಮಿಯು ಆಯೋಜಿಸಿರುವ ಱಅಕಾಡೆಮಿಡ್ ಒಂಜಿ ದಿನ : ಬಲೆ ತುಳು ಓದುಗ ಕಾರ್ಯಕ್ರಮ ಅತ್ಯಂತ ಸಕಾಲಿಕ ಹಾಗೂ ಮೌಲಿಕವಾಗಿದೆ ಎಂದು ತುಳು ವಿದ್ವಾಂಸ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಹೇಳಿದರು.

ನಗರದ ಉರ್ವಸ್ಟೋರ್‌ನ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಹಮ್ಮಿಕೊಂಡ ಱಅಕಾಡಮಿಡ್ ಒಂಜಿದಿನ : ಬಲೆ ತುಳು ಓದುಗ ಅಭಿಯಾನದ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ತುಳು ಕೇಳುವ ಹಾಗೂ ಮಾತುಕತೆಯ ಭಾಷೆಯಾಗಿತ್ತು. 16ನೇ ಶತಮಾನದ ಬಳಿಕ ಓದುವ ಪರಂಪರೆ ಆರಂಭಗೊಅಡಿತು, 19ನೇ ಶತಮಾನದ ಆರಂಭದಲ್ಲಿ ಬಾಸೆಲ್ ಮಿಶನ್‌ನವರು ತುಳುವಿನ ಪುಸ್ತಕಗಳ ಮುದ್ರಣಕ್ಕೆ ಆದ್ಯತೆ ನೀಡಿದ ಬಳಿಕ ತುಳು ಬರೆಯುವ ಹಾಗೂ ಓದುವ ಪರಂಪರೆ ವಿಸ್ತಾರಗೊಂಡಿತು ಎಂದು ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ತುಳುವಿನ ಓದು ಅಂದರೆ ಅದು ತುಳು ಬದುಕಿನ ಓದು. ಈ ಓದು ನಮ್ಮಲ್ಲಿ ಜ್ಞಾನ, ಕುತೂಹಲದ ಬಗ್ಗೆ ಪ್ರಶ್ನೆ ಮೂಡಿಸು ವುದು. ತುಳುವಿಗೆ ಒಂದು ತಾಕತ್ತು, ತಮೇರಿ ನೀಡುವ ಸಲುವಾಗಿ ಬರೆಯುವ ಹಾಗೂ ಓದುವ ಪರಂಪರೆಯನ್ನು ಮುಂದಕ್ಕೆ ಕೊಂಡೋಯ್ಯಬೇಕಾಗಿದೆ ಎಂದು ಪ್ರೊ. ಬಿ. ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ತುಳು ಅಧ್ಯಯನ ಕೇಂದ್ರದ 38 ವಿದ್ಯಾರ್ಥಿಗಳು ಪಾಲ್ಗೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಭಾಷೆ, ಸಂಸ್ಕೃತಿ ಬಗ್ಗೆ ಅಗಾಧವಾದ ಪುಸ್ತಕ ಭಂಡಾರವು ಅಕಾಡಮಿಯ ಗ್ರಂಥಾಲಯ ದಲ್ಲಿದೆ. ವಿದ್ಯಾರ್ಥಿ ಯುವಜನರಲ್ಲಿ ತುಳು ಓದಿನ ಅಭಿರುಚಿ ಮೂಡಿಸುವ ಹಿನ್ನೆಲೆಯಲ್ಲಿ ಅಕಾಡಮಿಯ ಬಲೆ ತುಳು ಓದುಗ ಅಭಿಯಾನ ಹಮ್ಮಿಕೊಂಡಿದೆ ಎಂದರು.

ಅಕಾಡಮಿಯ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ, ನಿವೃತ್ತ ಪತ್ರಗಾರ ಸಹಾಯಕ ಬೆನೆಟ್ ಅಮ್ಮನ್ನ, ಆಳ್ವಾಸ್ ತುಳು ಅಧ್ಯಯನ ಕೇಂದ್ರದ ಸಂಯೋಜಕ ಡಾ. ಯೋಗೀಶ್ ಕೈಕೋಡಿ ಮಾತನಾಡಿದರು.

ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಸಂತೋಷ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News