ಶಿಕ್ಷಕರಲ್ಲಿ ಜ್ಞಾನ ವರ್ಜನೆ ಮತ್ತು ಕಲಿಕಾ ಸಾಮರ್ಥ್ಯ ವೃದ್ಧಿಸಬೇಕು: ಪ್ರೊ.ಪಿ.ಎಲ್. ಧರ್ಮ

Update: 2024-10-25 12:10 GMT

ಮಂಗಳೂರು: ಶಿಕ್ಷಕರು ತಮ್ಮ ಜ್ಞಾನ ಮತ್ತು ಕಲಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿಷಯದ ಕುರಿತು ಆಸಕ್ತಿದಾಯಕವಾಗುವಂತೆ ಆಧುನಿಕ ಪಾಠ ಪ್ರವಚನಗಳನ್ನು ಬೋಧಿಸಬೇಕು ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಅಭಿಪ್ರಾಯಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗವು ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ ಎಂ.ಕಾಂ. ಕೋರ್ಸು ಕುರಿತ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಮತ್ತು ಪ್ರಾಕ್ಟಿಕಲ್ ಓರಿಯೆಂಟೆಡ್ ಮಾದರಿಯಲ್ಲಿ ತರಗತಿಗಳನ್ನು ನಡೆಸಬೇಕು. ನಿರಂತರ ಓದುವಿಕೆ ಮತ್ತು ಅಪ್ಡೇಟ್ ಆಗುವ ಮೂಲಕ ೨೧ನೇ ಶತಮಾನದ ವೇಗಕ್ಕೆ ಅನುಗುಣವಾಗಿ ಕಲಿಕಾ ಶಕ್ತಿಯನ್ನು ಹೆಚ್ಚಿಸಬೇಕು. ಸ್ನಾತಕೋತ್ತರ ಕೋರ್ಸಗ ಳಲ್ಲಿ ಪಠ್ಯಕ್ರಮಗಳನ್ನು ಪುನರ್ ವಿಮರ್ಶೆಗೊಳಿಸಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕೆ. ರಾಜು ಮೊಗವೀರ ಮತ್ತು ಐಕ್ಯುಎಸಿ ಯ ನಿರ್ದೇಶಕರಾದ ಪ್ರೊಫೆಸರ್. ಮೋನಿಕ ಸದಾನಂದ ಉಪಯುಕ್ತ ಮಾಹಿತಿಗಳನ್ನು ನೀಡಿದರು. ಕಾರ್ಯಗಾರದ ಉದ್ದೇಶ ಮತ್ತು ಮಹತ್ವದ ಕುರಿತು ವಾಣಿಜ್ಯ ವಿಭಾಗದ ಪೊ. ವೈ. ಮುನಿರಾಜು ಟಿಪ್ಪಣಿ ಮಂಡಿಸಿದರು.

ವೇದಿಕೆಯಲ್ಲಿ ಪೊ. ಈಶ್ವರ ಪಿ., ಪ್ರೊ. ವೇದವ ಪಿ. ಮತ್ತು ಪ್ರೊ. ಪರಮೇಶ್ವರ ಉಪಸ್ಥಿತರಿದ್ದರು. ಕಾರ್ಯಗಾರದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಿದ್ದರು.

ಕಾರ್ಯಗಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜಿನ ಎಂ. ಕಾಂ. ಕೋರ್ಸುಗಳ ಸಂಯೋಜ ಕರು ಮತ್ತು ಹಿರಿಯ ಪ್ರಾಧ್ಯಾಪಕರು ಸೇರಿದಂತೆ ಐವತ್ತಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News