ಅ.29ರಂದು ಬಿ.ಸಿ.ರೋಡಿನಲ್ಲಿ ಕರ್ನಾಟಕ ಸಅದೀಸ್ ಅಸೆಂಬ್ಲೇಜ್ ನೂರುಲ್ ಉಲಮಾ ಪ್ರಶಸ್ತಿ ಪ್ರದಾನ

Update: 2024-10-25 12:21 GMT

ಮಂಗಳೂರು, ಅ. 25: ಜಾಮಿಅಃ ಸಅದಿಯ್ಯಃ ಅರಬಿಯ್ಯಃ ಕಾಸರಗೋಡು ಇದರ 55ನೇ ವಾರ್ಷಿಕ ಮಹಾಸಮ್ಮೇಳನ ನ.22ರಿಂದ 24ರವರೆಗೆ ನಡೆಯಲಿದ್ದು ಅದರ ಪ್ರಚಾರಾರ್ಥ ಮಜ್ಲಿಸುಲ್ ಉಲಮಾಯಿಸ್ಸಅದಿಯ್ಯೀನ್ ಕರ್ನಾಟಕ ವತಿಯಿಂದ ರಾಜ್ಯದಾದ್ಯಂತ ಇರುವ ಸಅದೀ ಉಲಮಾಗಳನ್ನು ಒಗ್ಗೂಡಿಸಲು ಕರ್ನಾಟಕ ಸಅದೀಸ್ ಅಸೆಂಬ್ಲೇಜ್ ಕಾರ್ಯಕ್ರಮ ಪಾಣೆಮಂಗಳೂರಿನ ಸಾಗರ ಆಡಿಟೋರಿಯಂನಲ್ಲಿ ಅ.29ರಂದು ನಡೆಯಲಿದೆ.

ಕಾರ್ಯಕ್ರಮದಲ್ಲಿ ಬೆಳಗ್ಗೆ 10 ರಿಂದ ಜಾಮಿಅಃ ಸಅದಿಯ್ಯಃ ಪ್ರೊಫೆಸರ್‌ಗಳಾದ ಕೆ.ಕೆ.ಹುಸೈನ್ ಬಾಖವಿ ವಯನಾಡ್, ಉಬೈದುಲ್ಲಾಹಿ ಸಅದಿ ನದ್ವಿ, ಸ್ವಾಲಿಹ್ ಸಅದಿ ತಳಿಪರಂಬ ಅವರಿಂದ ವಿವಿಧ ವಿಷಯಗಳಲ್ಲಿ ತರಗತಿಗಳು ನಡೆಯಲಿವೆ. ಸಮಾರೋಪದಲ್ಲಿ ಜಾಮಿಅ ಸಅದಿಯ್ಯದ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾಗಿ ಆಯ್ಕೆಯಾಗಿರುವ ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್‌ರಿಗೆ ನೂರುಲ್ ಉಲಮಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಅದಿಯ್ಯಃ ಪ್ಲಾನಿಂಗ್ ಬೋರ್ಡ್ ಕರ್ನಾಟಕ ಚೇರ್ಮನ್ ಹಾಫಿಳ್ ಯಾಕೂಬ್ ಸಅದಿ ನಾವೂರು ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಾಮಿಅ ಸಅದಿಯ್ಯ ಸದರ್ ಮುದರ್‌ರಿಸ್ ಶೈಖುನಾ ಕೆ.ಕೆ. ಹುಸೈನ್ ಬಾಖವಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಅದಿಯ್ಯ ಅಧ್ಯಕ್ಷ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಝೈನುಲ್ ಉಲಮಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮತ್ತು ಕೆ.ಸಿ.ರೋಡ್ ಹುಸೈನ್ ಸಅದಿ ಭಾಷಣ ಮಾಡಲಿದ್ದಾರೆ. ಭಾರತದ ಗ್ರಾೃಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚೀಫ್ ಕೋ-ಆರ್ಡಿನೇಟರ್ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಜನರಲ್ ಕನ್ವೀನರ್ ಅಬ್ದುಲ್ ರಹೀಂ ಸಅದಿ ಖದರ್, ಮಜ್ಲಿಸುಲ್ ಉಲಮಾಯಿಸ್ಸಅದಿಯ್ಯೀನ್ ದ.ಕ ಜಿಲ್ಲಾಧ್ಯಕ್ಷ ಅಬ್ದುಲ್ ರಹ್ಮಾನ್ ಸಅದಿ ಕಂಕನಾಡಿ, ಎ.ಎಂ.ಇಸ್ಮಾಯಿಲ್ ಸಅದಿ ಉರುಮನೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News