ಯೆನೆಪೊಯ ಆಸ್ಪತ್ರೆ| ಬಾಲಕನ ಕಿಡ್ನಿ ಕಸಿ ಮಾಡಿದ ವೈದ್ಯಕೀಯ ತಂಡ

Update: 2024-10-25 13:29 GMT

ಕೊಣಾಜೆ: ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಒಂಬತ್ತು ವರ್ಷದ ಬಾಲಕನೋರ್ವನಿಗೆ ಮಂಗಳೂರಿನ ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.‌

ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ನೆಫ್ರೋ-ಯೂರಾಲಜಿಯ ವಿಶಿಷ್ಟ ತಂಡವು ಸಂಕೀರ್ಣವಾದ ಕಾರ್ಯವಿಧಾನದ ಮೂಲಕ ಚಿಕಿತ್ಸೆಯನ್ನು ನಡೆಸಿದ್ದಾರೆ. ಮೂತ್ರಶಾಸ್ತ್ರ ತಂಡದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ.ಮುಜೀಬು ರಹಿಮಾನ್ ಎಂ, ವೈದ್ಯರುಗಳಾದ ಡಾ. ಅಲ್ತಾಫ್ ಖಾನ್, ಡಾ. ನಿಶ್ಚಿತ್ ಡಿ’ಸೋಜಾ ಮತ್ತು ಡಾ.ಶರತ್ ಡಿ ವಿ, ನಾಳೀಯ ಶಸ್ತ್ರಚಿಕಿತ್ಸಕ ಡಾ.ಗಣೇಶ್ ಕಾಮತ್ ಇದ್ದರು.

ನೆಫ್ರಾಲಜಿ ತಂಡವು ಡಾ. ಸಂತೋಷ್, ಡಾ. ಹೈಸಮ್, ಡಾ. ಆದಿತ್ಯ ಮತ್ತು ಡಾ. ಪ್ರೀಮಾ ಅವರನ್ನು ಒಳಗೊಂಡಿತ್ತು. ಮಕ್ಕಳ ವೈದ್ಯರಾದ ಡಾ.ಸಹನಾ, ಡಾ.ಅರುಣ್ ವರ್ಗೀಸ್ ಹಾಗೂ ನುರಿತ ಅರಿವಳಿಕೆ ತಜ್ಞರು, ಡಾ. ತಿಪ್ಪೇಸ್ವಾಮಿ ಮತ್ತು ಡಾ. ಮಿಥಾಲಿ ಅವರು ತಂಡಕ್ಕೆ ಸಹಾಯ ಮಾಡಿದ್ದರು.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಬಾಲಕನ ದೈನಂದಿನ ಜೀವನದ ಮೇಲೆ ಹಾಗೂ ಅವನ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರಿತ್ತು.ಸಾಮಾನ್ಯ ಜೀವನಶೈಲಿಯನ್ನು ಒದಗಿಸಲು ಕಸಿ ಅತ್ಯಗತ್ಯವೆಂದು ವೈದ್ಯಕೀಯ ತಂಡವು ಪರಿಗಣಿಸಲಾಗಿತ್ತು. ಅಂತಿಮವಾಗಿ ಹುಡುಗನ ಅಜ್ಜಿಯು ತನ್ನ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ಹಾಗೂ ವೈದ್ಯಕೀಯ ತಂಡದ ಯಶಸ್ವಿ ಕಸಿಯ ಪರಿಣಾಮ ಬಾಲಕನ ಬದುಕಿಗೆ ಭರವಸೆಯನ್ನು ಒದಗಿಸಿದೆ.

ಮಕ್ಕಳ ಆರೈಕೆಯಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ ವೈದ್ಯಕೀಯ ತಂಡವನ್ನು ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ಶ್ಲಾಘಿಸಿದ್ದಾರೆ. ಸಹಕುಲಾಧಿಪತಿ ಫರ್ಹಾದ್ ಯೆನೆಪೊಯ ಮಾತನಾಡಿ, ನಗರದಲ್ಲಿ ಮೊದಲ ಮಕ್ಕಳ ಮೂತ್ರ ಪಿಂಡ ಕಸಿ ಮಾಡುವಲ್ಲಿ ಯಶಸ್ವಿಯಾದ ವೈದ್ಯಕೀಯ ತಂಡದ ಕೆಲಸ ಅತ್ಯಂತ ಪ್ರಮುಖ ಬೆಳವಣಿಗೆಯಾಗಿದೆ ಎಂದರು.

ಕುಲಪತಿ ಡಾ.ಎಂ.ವಿಜಯ ಕುಮಾರ್ ಮಾತನಾಡಿ, ಈ ಮೊದಲ ಮಕ್ಕಳ ಮೂತ್ರಪಿಂಡ ಕಸಿ ಕೇವಲ ವೈದ್ಯಕೀಯ ಸಾಧನೆಯಲ್ಲ, ಅನೇಕ ಕುಟುಂಬಗಳಿಗೆ ಭರವಸೆಯ ಬೆಳಕು, ಎಂದು ತಿಳಿಸಿದರು.

“ ವೈದ್ಯಕೀಯ ಅಧೀಕ್ಷಕ ಡಾ ಹಬೀಬ್ ರಹಮಾನ್ ಎ.ಎ. ನೆಲ್ವಿನ್ ನೆಲ್ಸನ್ ಮತ್ತು ಜುನೈದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News