ನ.28ರಂದು ಮೂಡಬಿದ್ರೆಯಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ

Update: 2024-11-21 14:38 GMT

ಮಂಗಳೂರು: ಲೋಕಾಯುಕ್ತ ಜನ ಸಂಪರ್ಕ ಸಭೆ ನ. 28ರಂದು ಬೆಳಗ್ಗೆ 11ಗಂಟೆಯಿಂದ ಮೂಡಬಿದ್ರೆ ತಾಲೂಕು ಕಚೇರಿಯಲ್ಲಿ ನಡೆಯಲಿದೆ.

ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದು.ಉಳಿದ ದಿನಗಳಲ್ಲೂ ಕಚೇರಿ ವೇಳೆಯಲ್ಲಿಯೂ ಸಾರ್ವಜನಿಕರು ಅಹವಾಲು/ದೂರುಗಳನ್ನು ನೀಡಬಹುದು ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದು.

ಅರ್ಜಿದಾರರು ನಮೂನೆ ಐ - ಐಐ ರಲ್ಲಿ ಭರ್ತಿ ಮಾಡಿ ಅಫಿದಾವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಈ ಕಚೇರಿಗೆ ಅಥವಾ ನೇರವಾಗಿ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ/ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ರವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಪೊಲೀಸ್‌ಅಧೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 0824 2950997, 9364062517, ಪೊಲೀಸ್‌ಉಪಾಧೀಕ್ಷಕರ ಕಚೇರಿ : ದೂರವಾಣಿ ಸಂಖ್ಯೆ 0824 : 2453420, 0824: 2453420, ಪೊಲೀಸ್ ನಿರೀಕ್ಷಕರು-1 ಕಚೇರಿ - ದೂರವಾಣಿ ಸಂಖ್ಯೆ 0824 :2427237, 9364062691, ಪೊಲೀಸ್ ನಿರೀೀಕ್ಷಕರು-2 ಕಛೇರಿ - ದೂರವಾಣಿ ಸಂಖ್ಯೆ 0824 : 2427237, 9364062692, ಪೊಲೀಸ್ ನಿರೀೀಕ್ಷಕರು-3 ಕಚೇರಿ ದೂರವಾಣಿ ಸಂಖ್ಯೆ 0824 : 2427237, 9364062693 ಸಂಪರ್ಕಿಸುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News