ಸಂತ ಕವಿ ಕನಕದಾಸರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ: ಡಾ. ನೇಸರ ಕಾಡನಕುಪ್ಪೆ

Update: 2024-11-21 17:49 GMT

ಕೊಣಾಜೆ: ಕನಕದಾಸರು ಶ್ರೇಣೀಕೃತ ಸಮಾಜದ ಮೇಲು ಕೀಳುಗಳನ್ನು ಮೀರಿನಿಂತ ದಾರ್ಶನಿಕರು. ವಚನಕಾರರು ಹಾಗೂ ದಾಸ ಪರಂಪರೆಯ ಕೀರ್ತನಕಾರರು ಬದುಕಿನ ಬಗೆಯನ್ನು ಹೇಗೆ ಎತ್ತರಿಸಬಹುದೆಂದು ವಿಭಿನ್ನ ಕಾಲಘಟ್ಟಗಳಲ್ಲಿ ಲೋಕಕ್ಕೆ ತೋರಿಸಿಕೊಟ್ಟರು. ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ನಿಟ್ಟೆ ಸಂವಹನ ಸಂಸ್ಥೆಯ ಸಹಪ್ರಾಧ್ಯಾಪಕರಾದ ಡಾ. ನೇಸರ ಕಾಡನಕುಪ್ಪೆ ಅವರು ಹೇಳಿದರು.

ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಅಂಗಸಂಸ್ಥೆ ಕೆ.ಎಸ್.‌ ಹೆಗ್ದೆ ಮೆಡಿಕಲ್‌ ಅಕಾಡೆಮಿ ಮತ್ತು ಡಾ. ಕೆ. ಆರ್.‌ ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆ.ಎಸ್.‌ ಹೆಗ್ಡೆ ಮೆಡಿಕಲ್‌ ಅಕಾಡೆಮಿಯ ಮೆಡಿಕಲ್‌ ಎಜ್ಯುಕೇಶನ್‌ ಯುನಿಟ್ ನ ಸಂಯೋಜಕರು ಮತ್ತು ಪೆಥಾಲಜಿ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಡಾ. ಕಿಶನ್‌ ಪ್ರಸಾದ್‌ ಎಚ್.‌ ಎಲ್. ಅವರು, ವೈದ್ಯರಲ್ಲಿ ಆಧ್ಯಾತ್ಮಿಕ ಮತ್ತು ಮಾನವೀಯ ಗುಣಗಳಿರಬೇಕು. ಕನಕದಾಸರು ಯುದ್ಧರಂಗದಲ್ಲಿ ಗಾಯಾಳುವಾಗಿ ಪ್ರಾಣಾಂತಿಕ ಸ್ಥಿತಿಯಲ್ಲಿದ್ದವರು, ಅವರೆನ್ನುವಂತೆ ದೈವಕೃಪೆಯಿಂದಲೇ ಬಳಿಕದ ಬದುಕು ತನಗೊದಗಿ ಬಂತೆಂಬುದನ್ನು ಕಂಡುಕೊಂಡು, ಆಧ್ಯಾತ್ಮಿಕ ಮತ್ತು ಮಾನವೀಯ ಸ್ಪರ್ಷವಿರುವ ತಮ್ಮ ಬರೆಹಗಳ ಮೂಲಕ ಬದುಕಿನ ಒಗಟನ್ನು ಒಡೆದು ತೋರಿದವರು. ಅವರ ಜೀವನ ಮೌಲ್ಯಗಳನ್ನು ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರೂ ಅಳವಡಿಸಿಕೊಳ್ಳ ಬೇಕಾದ ಅಗತ್ಯವಿದೆಯೆಂದು ಹೇಳಿದರು.

ಕಾರ್ಯಕ್ರಮ ಸಂಯೋಜಕರು, ಡಾ. ಕೆ.ಆರ್.‌ ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಸಾಯಿಗೀತಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎ.ಬಿ. ಶೆಟ್ಟಿ ದಂತವೈದ್ಯಕೀಯ ಕಾಲೇಜಿನ ಉದ್ಯೋಗಿ ರಂಜಿನಿ ಕನಕದಾಸರ ಕೀರ್ತನೆಯನ್ನು ಹಾಡಿದರು. ಪ್ರಥಮ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಕು. ಶ್ರುತಿ ಮತ್ತು ಕು. ಸಾನ್ವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News